
ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೇಶದಲ್ಲಿ ಬಾಂಬ್ ಸ್ಫೋಟವಾದರೂ ಪ್ರಧಾನಿ ಮೋದಿ ವಿದೇಶಿ ಪ್ರವಾಸ ಮೊಟಕುಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆದ್ದಿದೆ ಎಂದು ಆರೋಪ ಮಾಡಿದ್ದಾರೆ.
ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲೂ ನೋಡೇ ಇಲ್ಲ, ದೇಶದಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಪ್ರಧಾನಿ ಭೂತಾನ್ ರಾಜನ ಹುಟ್ಟುಹಬ್ಬವನ್ನು ಮುಗಿಸಿ ಬಂದಿದ್ದಾರೆ. ದೆಹಲಿ ಸ್ಫೋಟ ಆದಾಗ ಪ್ರಧಾನಿ ವಾಪಾಸ್ ಬರಬಹುದಿತ್ತು. ಆದರೆ ವಾಪಾಸ್ ಬರದೇ ಭೂತಾನ್ ಪ್ರಧಾನಿ ಹುಟ್ಟುಹಬ್ಬವೇ ಮುಖ್ಯವಾಗಿತ್ತು ಎಂದು ಕಿಡಿಕಾರಿದ್ದಾರೆ.









