
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ 52 ರನ್ ಗಳ ಜಯ ಸಾಧಿಸುವ ಮೂಲಕ ಮೊದಲ ಬಾರಿಗೆ ಚೊಚ್ಚಲ ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿದೆ.
ಮೊದಲು ಆಡಿದ ಭಾರತ ತಂಡ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 298 ರನ್ ಗಳ ಮೊತ್ತ ಗಳಿಸಿದ್ದು, ದಕ್ಷಿಣ ಆಫ್ರಿಕಾ 45.3 ಓವರ್ ಗಳಲ್ಲಿ 246 ರನ್ ಗಳಿಸುವ ಮೂಲಕ ಆಲ್ ಔಟ್ ಆಗಿದೆ.
ಚಾಂಪಿಯನ್ ಪಟ್ಟದೊಂದಿಗೆ ಟೀಮ್ ಇಂಡಿಯಾ ಕೋಟಿ ರೂ.ಬಹುಮಾನ ಮೊತ್ತವನ್ನು ಸಹ ಪಡೆದುಕೊಳ್ಳುವುದರ ಜೊತೆಗೆ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರ್ತಿಯರು ಸಂಭ್ರಮಿಸಿದ ಪರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.






















































