
ನವದೆಹಲಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪಿಎಂ ಕಿಸಾನ್ ಯೋಜನೆ ಅಡಿ 21ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಶೀಘ್ರವೇ ಜಮೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಹೇಳಿದ್ದರೂ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ. ಇದೀಗ ಕೆಲ ವರದಿಗಳು ನವೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗಬಹುದು ಎಂದು ಹೇಳುತ್ತಿದ್ದು ಆದರೆ ಸರ್ಕಾರದಿಂದ ಹಣ ಬಿಡುಗಡೆ ದಿನದ ಕುರಿತು ಅಧಿಕೃತವಾಗಿ ಮಾಹಿತಿ ಬಂದಿಲ್ಲ.
ಕೃಷಿ ಸಚಿವರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿರುವ ಎಲ್ಲಾ ರೈತರ ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿ ಪೂರ್ಣಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು ರಾಜ್ಯ ಸರ್ಕಾರಗಳಿಂದ ರೈತರ ಪರಿಶೀಲಿತ ಪಟ್ಟಿ ಎಷ್ಟು ಬೇಗ ಕೇಂದ್ರವನ್ನು ತಲುಪುತ್ತದೋ ಅಷ್ಟು ಬೇಗ ಈ ಬಾರಿ ಕಿಸಾನ್ ಹಣ ರೈತರಿಗೆ ಸಿಗುತ್ತದೆ.
ಪ್ರವಾಹ ಮತ್ತು ಭೂಕುಸಿತ ಘಟನೆಗಳು ಸಂಭವಿಸಿದ್ದರಿಂದ ಈಗಾಗಲೇ ಪಂಜಾಬ್, ಹರ್ಯಾಣ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಸೆ. 26 ರಂದು ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಉಳಿದ ರಾಜ್ಯಗಳ ರೈತರಿಗೆ ನವೆಂಬರ್ ನಲ್ಲಿ ಹಣ ಜಮೆಯಾಗುವ ನಿರೀಕ್ಷೆಯಿದೆ.








