
ದಿನಾಂಕ 27-09-2025ನೇ ಶನಿವಾರ ಹಾಳೆಕಟ್ಟೆ ಕಲ್ಯಾಸ್ತ್ರೀ ಶಕ್ತಿ ಸಂಘಗಳ “25ನೇ ವರ್ಷದ ರಜತಮಹೋತ್ಸವ” ಸಂಭ್ರಮಾಚರಣೆಯನ್ನು ಉಷಾ ವಿವೇಕ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚೈತನ್ಯ ಮಿತ್ರಮಂಡಳಿಯ ರೂವಾರಿಯಾದ ಯತೀಶ್ ಎನ್. ಕೋಟ್ಯಾನ್ಹಾಗೂ ವೇದಿಕೆಯಲ್ಲಿ ಆಸೀನರಿದ್ದ ಗಣ್ಯರು ನೆರವೇರಿಸಿದರು.ಸಂಜೀವಿನಿ ಒಕ್ಕೂಟದ ಅಧ್ಯಕ್ಷರುಗಳಿಗೆ, ಸ್ತ್ರೀ ಶಕ್ತಿಸಂಘಗಳ ಪ್ರತಿನಿಧಿಗಳಿಗೆ, ಉತ್ತಮ ಪುಸ್ತಕನಿರ್ವಹಣಾಗಾರರಿಗೆ ಸನ್ಮಾನಿಸಲಾಯಿತು. ಗಣ್ಯರನ್ನುಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಹಲವುವರ್ಷಗಳಿಂದ ದ್ವಿಚಕ್ರ ವಾಹನ ತರಬೇತಿಯನ್ನುನೀಡುತ್ತಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಉಷಾವಿವೇಕ್ಇವರನ್ನು ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂತರಬೇತಿಯನ್ನು ಪಡೆದ ಮಹಿಳೆಯರು ಸೇರಿಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯಕ್ರಮವ್ಯವಸ್ಥಾಪಕರು ಉಮಾ, ಮಹಿಳಾ ಒಕ್ಕೂಟ ಮತ್ತುಸಾಂತ್ವನ ಕೇಂದ್ರದ ಅಧ್ಯಕ್ಷರು ಯಶೋಧ ಶೆಟ್ಟಿ, ಚೈತನ್ಯ ಮಿತ್ರ ಮಂಡಳಿಯರೂವಾರಿ ಯತೀಶ್ ಎನ್. ಕೋಟ್ಯಾನ್, ಗ್ರಾಮಪಂಚಾಯತ್ ಸದಸ್ಯರು ಜಗದೀಶ ಆಚಾರ್ಯ ಹಾಗೂಪ್ರೇಮ ಪೂಜಾರಿ ಹಾಗೂ ಸ್ತ್ರೀ ಶಕ್ತಿ ಸಂಘಗಳಪ್ರತಿನಿಧಿಗಳು ಹಾಗೂ ಸರ್ವ ಸದಸ್ಯರು, ಎಂ.ಬಿ.ಕೆ.,ಎಲ್.ಸಿ.ಆರ್.ಪಿ.ಯವರು, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಸುನೀತಾನಿರೂಪಣೆ ಗೈದರು.

ಸುಮನಾ ಹರೀಶ್, ಶಾಲಿನಿ, ಕೀರ್ತಿ ಶೆಟ್ಟಿಯವರು ಪ್ರಾರ್ಥನೆ ಮಾಡಿದರು, ಸುಮನಾ ಹರೀಶ್ ವೇದಿಕೆಯಲ್ಲಿದ್ದ ಗಣ್ಯರಿಗೆ ಹೂನೀಡಿ ಸ್ವಾಗತಿಸಿದರು. ಹಾಗೂ ಪ್ರತಿಮಾ ಸಿ. ಅಮೀನ್ವರದಿ ವಾಚಿಸಿದರು. ಎಂ.ಬಿ.ಕೆ. ಸುಜಾತರವರುವಂದನಾರ್ಪಣೆಗೈದರು. ರಾಷ್ಟ್ರ ಗೀತೆಯೊಂದಿಗೆಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.



















