31 C
Udupi
Thursday, April 23, 2026
spot_img
spot_img
HomeBlogಶ್ರೀ ಭುವನೇಂದ್ರ ಕಾಲೇಜು ನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಹಾಗೂ ಮಾನವಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ...

ಶ್ರೀ ಭುವನೇಂದ್ರ ಕಾಲೇಜು ನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಹಾಗೂ ಮಾನವಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಹಾಗೂ ಮಾನವಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.

ಸಾಣೂರು ಪದವಿಪೂರ್ವ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಟಿ ಪಿ ಮಂಜುನಾಥ ಪ್ರಸಾದ್ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಮುನ್ನ ಬೇರೆ ಬೇರೆ ರೀತಿಯ ಆಡಳಿತ ವ್ಯವಸ್ಥೆಯನ್ನು ಹೊಂದಿತ್ತು ಈಗ ಅದು ಬದಲಾಗಿದೆ ಸಮಾನತೆಯ ಮೂಲತತ್ವವೇ ಪ್ರಜಾಪ್ರಭುತ್ವ ನಮ್ಮ ಈ ವ್ಯವಸ್ಥೆಯನ್ನು ಇತ್ತೀಚೆಗೆ ಎಲ್ಲ ಹಲವಾರು ದೇಶಗಳು ಒಪ್ಪಿಕೊಳ್ತಾ ಇವೆ ಭಾರತ ಎಲ್ಲ ದೇಶಗಳಲ್ಲೂ ಇವತ್ತು ಗುರುತಿಸಿಕೊಂಡಿದೆ ಎಲ್ಲ ಸಮಾನತೆಯ ಜೊತೆಗೆ ಸ್ತ್ರೀಯರಿಗೂ ಸಮಾನತೆಯ ಅವಕಾಶಗಳನ್ನು ಕೊಟ್ಟಾಗ ಆಕೆಯೂ ಮುಂದುವರಿಯಲು ಸಾಧ್ಯವಾಗುತ್ತದೆ ಸಾವಿತ್ರಿ ಬಾಪುಲೆಯಂತಹ ಸ್ತ್ರೀಯರ ಹೋರಾಟದ ಪರವಾಗಿ ಇದು ಸಾಧ್ಯವಾಗಿದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ ಈಶ್ವರ ಭಟ್ ಮಾತನಾಡುತ್ತಾ ಪ್ರಜಾಪ್ರಭುತ್ವ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ. ಇಂದಿನ ತಂತ್ರಜ್ಞಾನ ಜನರ ಮನೋಭೂಮಿಕೆಯನ್ನೇ ಬದಲು ಮಾಡುವಂತಹ ವ್ಯವಸ್ಥೆಯನ್ನು ಹೊಂದಿದೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿಯಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ಕು ರಂಜಿತಾ ಉಪಸ್ಥಿತರಿದ್ದರು.ಮತದಾರರ ಸಾಕ್ಷರತಾ ಕ್ಲಬ್ ನ ಸಂಯೋಜಕಿ ಶ್ರೀಮತಿ ಸುಮಾಲಿನಿ ಜೈನ್ ಸ್ವಾಗತಿಸಿ ಐಕ್ಯೂಎಸಿ ಸಂಯೋಜಕರಾದ ಪ್ರೊ ಲಕ್ಷ್ಮೀನಾರಾಯಣ ಪ್ರಾಸ್ತಾವಿಕ ಮಾತುಗಳನ್ನಾಡಿದರು ಕು ಸಿಂಚನ ಕಾರ್ಯಕ್ರಮ ನಿರೂಪಿಸಿದರು ಕು ವರ್ಷಾ ಧನ್ಯವಾದ ಸಮರ್ಪಿಸಿದರುಈ ಸಂದರ್ಭದಲ್ಲಿ ಕು ಸಿಂಚನಾ ಹಾಗೂ ಕು ಸ್ಪಂದನ ಸ್ವರಚಿತ ಪ್ರಜಾಪ್ರಭುತ್ವ ಗೀತೆಯನ್ನು ಹಾಡಿದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page