
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದಲ್ಲಿ ಮಾತನಾಡಿ ಮುಸ್ಲಿಮರಲ್ಲಿ ಮರುಜನ್ಮ ಅನ್ನೋದೇ ಇಲ್ಲ. ಹಾಗಾಗಿ, ಸಿಎಂ ಮತ್ತು ಸಂಗಮೇಶ್ ಈಗಲೇ ಇಸ್ಲಾಂಗೆ ಹೋಗಿಬಿಡಲಿ ಎಂದು ಕಿಡಿಕಾರಿದರು.
ಮುಸ್ಲಿಮರಲ್ಲಿ ಮರುಜನ್ಮ ಅನ್ನೋದೇ ಇಲ್ಲ. ಸಂಗಮೇಶ್ ಮುಸ್ಲಿಮರ ಜತೆಗೇ ಹೋಗಿಬಿಡಲಿ. ಹಿಂದೂಗಳ ಮತ ಬೇಕಿಲ್ಲ ಅಂತ ಹೇಳಲಿ. ಸಂಗಮೇಶ್ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ. ಸಲಾಲುದ್ದೀನ್ ಖಿಲ್ಜಿ ಅಥವಾ ಶಂಶುದ್ದೀನ್ ಅಥವಾ ಸಲ್ಮಾನ್ ಖಾನ್ ಅಂತ ಹೆಸರು ಬದಲಾಯಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.



















