
ಅಹಮದಾಬಾದ್: ಜೂನ್ 12ರಂದು ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಬಂದಿರುವ ಪ್ರಾಥಮಿಕ ವರದಿ ಕುರಿತು ಮೃತರ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಅದೇನೆಂದರೆ ಪ್ರಾಥಮಿಕ ತನಿಖೆಯನ್ನು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ಹಾಗೂ ಭಾರತ ಸರ್ಕಾರವನ್ನು ರಕ್ಷಿಸುವ ರೀತಿ ತಯಾರಿಸಲಾಗಿದೆ. ಮೃತ ಪೈಲಟ್ ಮೇಲೆ ತಪ್ಪು ಹೊರಿಸಬೇಡಿ ಅವರು ಬಂದು ಆರೋಪವನ್ನು ಸತ್ಯ ಅಲ್ಲ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ, ಈ ವರದಿ ತಪ್ಪು ನಾವು ಅದನ್ನು ಒಪ್ಪುವುದಿಲ್ಲ ಎಂದು ಓರ್ವ ಮೃತನ ಸಂಬಂಧಿಕ ಅಮೀನ್ ಸಿದ್ದಿಕಿ ಹೇಳಿದ್ದಾರೆ.
ಜುಲೈ 13ರಂದು ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತದ ಪ್ರಾಥಮಿಕ ತನಿಖಾ ವರದಿಯನ್ನು ಎಎಐಬಿ ಬಿಡುಗಡೆ ಮಾಡಿದ್ದು ಆರಂಭಿಕ ವರದಿಯು ಎಂಜಿನ್ ಅಥವಾ ಬೋಯಿಂಗ್ ವ್ಯವಸ್ಥೆಗಳಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ನೀಡಿದೆ. ಏರ್ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ಕಟ್ ಆಫ್ ಸ್ಥಿತಿಯಲ್ಲಿ ಇದ್ದವು. ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನಿಖೆಯಿಂದ ಗೊತ್ತಾಗಿತ್ತು. ಈ ಲೋಪದಿಂದಾಗಿ ವಿಮಾನವು ಟೇಕ್–ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ಎಎಐಬಿ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ್ದ ಫೈಜಾನ್ ರಫೀಕ್ ಅವರ ಸಂಬಂಧಿ ಸಮೀರ್ ಮಾತನಾಡಿ, ವಿಮಾನಯಾನ ಸಂಸ್ಥೆಯು ಕಾಕ್ಪಿಟ್ ರೆಕಾರ್ಡಿಂಗ್ ಅನ್ನು ನಮಗೆ ಒದಗಿಸುವವರೆಗೂ ವರದಿ ನಂಬುವುದಿಲ್ಲ ಎಂದು ಹೇಳಿದ್ದಾರೆ.






















































