
ಜಾಲಿ ಬಾಯ್ಸ್ ಬಜಗೋಳಿ ನೇತೃತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಗೋಳಿ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂಶೈಕ್ಷಣಿಕ ಪರಿಕರಗಳ ವಿತರಣೆ ಮಾಡಲಾಯಿತು
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿಯವರು ಕಳೆದ ಹಲವು ವರ್ಷಗಳಿಂದ ಜ್ವಾಲಿ ಬಾಯ್ಸ್ ಬಜಗೋಳಿ ಎಂಬ ಯುವಕರ ತಂಡ ಸಮಾನ ಮನಸ್ಕ ಸ್ನೇಹಿತರ ಸಹಕಾರ ಪಡೆದು ಸರಕಾರಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವುದು ಸಮಾಜಕ್ಕೆ ಮಾದರಿ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಸಾಮಾಜಿಕ ಚಿಂತಕರಾದ ವರ್ಧಮಾನ್ ಜೈನ್ ಯುವ ಸಂಘಟನೆ ಸಮಾಜದಲ್ಲಿ ಸಾಮಾಜಿಕ ಬದ್ದತೆಯ ಕೆಲಸ ಮಾಡಿದಾಗ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ಸಾಧ್ಯ ಎಂದು ನುಡಿದರು.ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದೀಪಕ್ ಅತಿಕಾರಿ, ನಿಕಟಪೂರ್ವ ಅಧ್ಯಕ್ಷರಾದ ನಿತೇಶ್ ಶೆಟ್ಟಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ಎಸ್.ಎಲ್.ಎರ್.ಎಂ.ಮೇಲ್ವಿಚಾರಕಿ ಮಾಧವಿ ಪ್ರಭು, ಉದ್ಯಮಿಗಳಾದ ಆರಿಸ್.ಪಿ, ಮುಖ್ಯೋಪಾಧ್ಯಾಯ ರಾದ ಶೋಭಾ ಎಸ್. ಶೆಟ್ಟಿ ,ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್,ಜ್ವಾಲಿ ಬಾಯ್ಸ್ ತಂಡದ ಸದಸ್ಯರು, ಎಸ್.ಡಿ.ಎಂ.ಸಿ.ಸದಸ್ಯರು, ಶಿಕ್ಷಕಿಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








