
19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರಿನ ದರ ಭಾರಿ ಇಳಿಕೆ ಕಂಡಿದ್ದು ,ಹೋಟೆಲ್ ಮತ್ತು ಅಡುಗೆ ತಯಾರಕರು ಸ್ವಲ್ಪಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ.
ಸಿಲಿಂಡರ್ ಬೆಲೆ 58.50 ಗಳಷ್ಟು ಕಡಿಮೆಯಾಗಿದ್ದು ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ 14.2 ಕೆಜಿಯ ದೇಸಿಯ ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್ ಪಿ ಜಿ ಸಿಲಿಂಡರ್ ನ ಬೆಲೆ 1,723.50 ರೂ. ಬದಲಿಗೆ ಒಂದು ಸಾವಿರದ 1665 ರೂ ಗಳಿಗೆ ಲಭ್ಯವಿರುತ್ತದೆ.








