22.1 C
Udupi
Sunday, February 1, 2026
spot_img
spot_img
HomeBlogಏರ್ ಇಂಡಿಯಾ ವಿಮಾನ ಪತನ ಘಟನೆಯಲ್ಲಿ ಮೃತಪಟ್ಟವರ ಡಿಎನ್‌ಎ ಟೆಸ್ಟ್ ಪ್ರಕ್ರಿಯೆಯಲ್ಲಿ 80 ಜನರ ಡಿಎನ್‌ಎ...

ಏರ್ ಇಂಡಿಯಾ ವಿಮಾನ ಪತನ ಘಟನೆಯಲ್ಲಿ ಮೃತಪಟ್ಟವರ ಡಿಎನ್‌ಎ ಟೆಸ್ಟ್ ಪ್ರಕ್ರಿಯೆಯಲ್ಲಿ 80 ಜನರ ಡಿಎನ್‌ಎ ಮ್ಯಾಚ್: 33 ಮೃತದೇಹಗಳ ಹಸ್ತಾಂತರ

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ ಘಟನೆಯಲ್ಲಿ ಮೃತಪಟ್ಟವರ ಡಿಎನ್‌ಎ ಟೆಸ್ಟ್ ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ 80 ಜನರ ಡಿಎನ್‌ಎ ಮ್ಯಾಚ್ ಆಗಿದೆ. ಒಟ್ಟು 33 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಅಹಮದಾಬಾದ್ ಮೂಲದ 12 ಮಂದಿ, ಬರೋಡಾದ ಐದು ಮಂದಿ, ಮೆಹ್ಸಾನಾದಿಂದ ನಾಲ್ಕು ಮಂದಿ, ಆನಂದ್‌ನಿಂದ ನಾಲ್ಕು ಮಂದಿ, ಖೇಡಾ, ಭರೂಚ್‌ನಿಂದ ತಲಾ ಇಬ್ಬರು, ಉದಯಪುರ, ಜೋಧ್‌ಪುರ ಬೋಟಾಡ್‌ನಿಂದ ತಲಾ ಒಬ್ಬರ ಮೃತದೇಹ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ.

ಈ ದುರಂತ ಸಂಭವಿಸಿದ ಮೂರು ದಿನಗಳ ನಂತರ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ರೂಪಾನಿ ಅವರ ಡಿಎನ್‌ಎಗೆ ಮ್ಯಾಚ್ ಆಗಿದ್ದು ಇಂದು ರಾಜ್‌ಕೋಟ್‌ನಲ್ಲಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದ್ದು ಮೃತದೇಹಗಳಿಗಾಗಿ ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಕಾಯುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page