
ಮಾಳ ಗ್ರಾಮ ಪಂಚಾಯತ್ ಇಲ್ಲಿ ಸುಮಾರು 21 ವರ್ಷಗಳಿಂದ ನೀರಿನ ಪಂಪು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ರತ್ನಾಕರ ಆಚಾರ್ಯ ನಿವೃತ್ತಿ ಹೊಂದಿದ ಕಾರಣ ಅವರನ್ನು ಮಾಳ ಶ್ರೀರಾಮ ಮಂದಿರ ಸಭಾಭವನದಲ್ಲಿ ಸನ್ಮಾನಿಸಲಾಯಿತು .
ಇವರಿಗೆ ಮೈಸೂರು ಪೇಟ ಶಾಲು ಹಾಕಿ ನೆನಪಿನ ಕಾಣಿಕೆಯನ್ನು ನೀಡಿ ಚಿನ್ನದ ಉಂಗುರವನ್ನು ಹಾಕಿ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ ಪಂಚಾಯತ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಗೌರವಿಸಿದರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿದ್ದರು ಪಂಚಾಯತ್ ಕಾರ್ಯದರ್ಶಿ ಸವಿತ ಕುಮಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



















