
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ) 2027ರ ಫೆಬ್ರವರಿಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನ, ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ ಎಂ ಏನ್ ರಾಜೇಂದ್ರ ಕುಮಾರ್ ರವರ ಮುಂದಾಳತ್ವದಲ್ಲಿ ನಡೆಯುವ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ಮುಂಬೈಯ ಧುಲೆ ಎಂಬಲ್ಲಿ ವಿಹಾರ ಇರುವ ಪೂಜ್ಯ ಯುಗಲ ಮುನಿ ಮಹಾರಾಜರನ್ನು ಸಮಿತಿಯ ಪ್ರಧಾನ ಕಾರ್ಯದಶಿಯವರಾದ ಶ್ರೀ ಪುಷ್ಪರಾಜ್ ಜೈನ್ ಮಂಗಳೂರು, ಕಾರ್ಯದರ್ಶಿಗಳಾದ ಭರತ್ ಕುಮಾರ್ ಜೈನ್ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಹಿರಿಯರಾದ ಶ್ರೀ ಶ್ರೀವರ್ಮ ಜೈನ್, ರಘುಚಂದ್ರ ಜೈನ್, ಮಾಲತಿ ವಸಂತರಾಜ್, ವಿಜಯಲಕ್ಷ್ಮಿ ಹೇಮಚಂದ್ರ ಜೈನ್, ಮೋಹಿನಿ ವರ್ಧಮಾನ್, ಅಭೀಷ್ಟ ಕುಮಾರ್ ರವರು ಬೇಟಿ ನೀಡಿ ಪೂಜ್ಯ ಯುಗಲ ಮುನಿಮಹಾರಾಜರಿಂದ ಆಶೀರ್ವಾದ ಪಡೆಯಲಾಯಿತು.

















































