
ಮೈಸೂರು: ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಕಾಮ್ ನಲ್ಲಿ ನಡೆದ ಕೃತ್ಯದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಒಂದು ಜವಾಬ್ದಾರಿಯುತ ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವುದರಿಂದ ತಾನು ಪಹಲ್ಗಾಮ್ ಭಯೋತ್ಪಾದಕರ ದಾಳಿಯ ಬಗ್ಗೆ ಏನನ್ನೂ ಕಾಮೆಂಟ್ ಮಾಡಲ್ಲ, ಮಾತಾಡಿದರೆ ಅದನ್ನೇ ಲೀಡ್ ಮಾಡಿಕೊಂಡು ಜನ ಟೀಕೆ ಮಾಡುತ್ತಾರೆ.
ಬೇರೆ ದೇಶದ ಜನ ನಮ್ಮ ದೇಶದಲ್ಲಿನ ಶಾಂತಿ ಕದಡುವಂತೆ ಮಾಡಿದ್ದಾರೆ. ನಮ್ಮ ಜನರಿಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಿದ್ದು ಉಗ್ರರನ್ನು ಸದೆಬಡಿಯುವ ಕೇಂದ್ರ ಸರ್ಕಾರದ ಸಂಕಲ್ಪದ ಜೊತೆಗೆ ನಾವಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.




