
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 08/03/2024ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ನಮ್ಮ ಎಸ್ . ಎಸ್.ಆರ್.ವಿ.ಎಂ. ಸಂಸ್ಥೆಯ ಪರವಾಗಿ ಪೊಲೀಸ್ ಠಾಣೆ, ಪೆಟ್ರೋಲ್ ಬಂಕ್, ಪೋಸ್ಟ್ ಆಫೀಸ್ ಮತ್ತು ಇತರ ಸಂಸ್ಥೆಗಳಿಗೆ ಭೇಟಿ ನೀಡಿ ಮಹಿಳೆಯರ ನಿಷ್ಠೆ ,ಪರಿಶ್ರಮ ಮತ್ತು ಸಮುದಾಯಕ್ಕೆ ಅವರು ಸಲ್ಲಿಸುತ್ತಿರುವ ಅಚಲವಾದ ಬದ್ಧತೆಗಾಗಿ ಅವರನ್ನು ಗೌರವಿಸಲಾಯಿತು.
ಅಲ್ಲದೆ ವಿದ್ಯಾರ್ಥಿಗಳ ಸಮಗ್ರಅಭಿವೃದ್ಧಿಗಾಗಿ ಶಿಕ್ಷಕರು ಮತ್ತು ಪೋಷಕರ ನಡುವೆ ಬಲವಾದ ಸಂಪರ್ಕವನ್ನು ಬೆಳೆಸಲು ಓಪನ್ ಹೌಸ್ ಪೋಷಕರ ಮತ್ತು ಶಿಕ್ಷಕರ ಸಭೆಯನ್ನು ಆಯೋಜಿಸಲಾಗಿತ್ತು. ಇದಕ್ಕೆ ಹೆಚ್ಚುವರಿಯಾಗಿ ರಸಪ್ರಶ್ನೆ, ನಾಲಗೆಗೆ ಕಸರತ್ತು, ಒಗಟುಗಳು, ಗಾದೆ ಮೊದಲಾದ ವಿವಿಧ ವಿನೋದಮಯ ಕೌಂಟರ್ ಗಳನ್ನು ತೆರೆಯಲಾಗಿತ್ತು. ಇದು ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಪ್ರತಿಭೆ ಪ್ರದರ್ಶಿಸಲು ಹಾಗೂ ಆನಂದಿಸಲು ವೇದಿಕೆ ಒದಗಿಸಿತು. ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.



















