ಗಣೇಶ್ ಜಾಲ್ಸೂರು

ಪ್ರಿಯ ವಿದ್ಯಾರ್ಥಿಗಳೇ….. ನಮಸ್ಕಾರ,
ಮುಖ್ಯವಾಗಿ ತಾವೆಲ್ಲರೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯಲು ಸಿದ್ಧರಾದವರು. ಹಾಗಾಗಿ ಮೊದಲಾಗಿ ನಿಮಗೆ ಆಲ್ ದಿ ಬೆಸ್ಟ್ ಹೇಳಲು ಬಹಳ ಖುಷಿಪಡುತ್ತೇನೆ. ಈಗಾಗಲೇ ತಿಳಿದ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಎಂಟು ಲಕ್ಷದ ಎಪ್ಪತ್ತೈದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.ಅವರಲ್ಲಿ ನೀವೂ ಕೂಡ ಒಬ್ಬರು ಎನ್ನುವುದು ನಮಗೆಲ್ಲರಿಗೂ ಹೆಮ್ಮೆ ಎನಿಸಿದೆ. ನೀವೂ ನಿಜವಾಗಿಯೂ ಭಾಗ್ಯವಂತರು.
ಇದೀಗ ರಾಜ್ಯ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಪರೀಕ್ಷಾ ಮಂಡಳಿಯು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಜೊತೆಯಲ್ಲಿ ಆಯಾ ಜಿಲ್ಲೆಯ ಜಿಲ್ಲಾಡಳಿತ ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಂತೆಯೇ ತಾಲೂಕು ಆಡಳಿತ ತಾಲೂಕು ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳ ಅಚ್ಚುಕಟ್ಟಾದ ವ್ಯವಸ್ಥೆಯನ್ಪು ಮಾಡಿಕೊಡುವಲ್ಲಿ ಕಾರ್ಯಪ್ರವೃತ್ತವಾಗಿದೆ. ಕ್ಷೇತ್ರದ ಜನಪ್ರತಿನಿಧಿಗಳು ಶಾಲಾ ಆಡಳಿತ ಮಂಡಳಿ ಸದಸ್ಯರು ಪೋಷಕರು ಹಾಗೂ ಊರ ವಿದ್ಯಾಭಿಮಾನಿಗಳು ಎಲ್ಲರೂ ವಿದ್ಯಾರ್ಥಿಗಳಾದ ತಮಗೆ ಶುಭ ಹಾರೈಸುತ್ತಿದ್ದಾರೆ. ಭವಿಷ್ಯದ ಜೀವನ ಒಳಿತಾಗಲಿ ಎಂದು಼ ಹೇಳುತ್ತಿದ್ದಾರೆ. ಹೀಗೇ ಎಲ್ಲಾ ರೀತಿಯ ಪ್ರೋತ್ಸಾಹ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳೇ ಇದು ಬಹಳ ಗಂಭೀರವಾದ ಮತ್ತು ನಿಮ್ಮ ಕಲಿಕಾ ಮೌಲ್ಯಮಾಪನಕ್ಕೆ ಯೋಗ್ಯವಾದ ಪರೀಕ್ಷೆಯೂ ಆಗಿದೆ . ಈ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿ ತಾವೂ ಕೂಡ ಈ ಪರೀಕ್ಷೆಯನ್ನು ಬರೆದು ಗೆಲುವು ತಮ್ಮದಾಗಿಸಿ ಮುಂದಿನ ವ್ಯಾಸಂಗದ ಹಾದಿಯನ್ನು ಸುಗಮಗೊಳಿಸಿಕೊಳ್ಳಿರಿ.
ವಿದ್ಯಾರ್ಥಿಗಳೇ…..
ತಾವು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ರಾಜ್ಯದ ಗಮನ ಸೆಳೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯಲು ಎಲ್ಲಾ ಅರ್ಹತೆಯನ್ನು ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದೀರಿ. ಈ ಅವಕಾಶ ನಿಜವಾಗಿಯೂ ನಿಮಗೊಂದು ಸುವರ್ಣಾವಕಾಶ. ಏಕೆಂದರೆ ನಿಮ್ಮ ಪೂರ್ವ ಪ್ರಾಥಮಿಕ , ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣದಿಂದ ಇದುವರೆಗೆ ಸಂಪಾದಿಸಿಕೊಂಡ ಜ್ಞಾನವನ್ನು ಒರೆಗಲ್ಲಿಗೆ ಹಚ್ಚುವ ಸಕಾಲವೂ ಹೌದು ಸುಯೋಗ್ಯವಾದುದು ಹೌದು ಈಗ ಪ್ರೌಢಶಾಲಾ ವಿದ್ಯಾರ್ಥಿಗಳಾಗಿ ಮೂರು ವರುಷದಿಂದ ಸತತ ಜ್ಞಾನಾರ್ಜನೆಯನ್ನು ಮಾಡಿರುವಿರಿ. ಆದರೆ ಕಲಿಕಾ ಪರೀಕ್ಷೆಯು ನಿಮಗೇನು ಹೊಸತಲ್ಲ ಶಾಲೆಗೆ ಸೇರಿದಂದಿನಿಂದ ಎಲ್ಲಾ ಪಠ್ಯ ವಿಷಯಗಳ ಪರೀಕ್ಷೆಯನ್ನು ಆಯಾಯ ತರಗತಿಗಳಿಗನುಗುಣವಾಗಿ. ಬರೆದು ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ತೇರ್ಗಡೆ ಹೊಂದುತ್ತಲೇ ಬಂದಿರುವಿರಿ .ಅದರಲ್ಲಿ ನೀವೂ ಯಶಸ್ಸುನ್ನು ಕಂಡುಕೊಂಡಿರುವಿರಿ. ಹಾಗಾಗಿಯೇ ಈಗ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿ ಮುಂದೆ ಕಾಲೇಜು ಶಿಕ್ಷಣ ಪಡೆಯುವ ನಿರೀಕ್ಷೆ ಯ ಖುಷಿ ನಿಮ್ಮಲ್ಲಿದೆ.
ಈಗಾಗಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿ ನೀವು ವಾರ್ಷಿಕ ಪರೀಕ್ಷೆಯನ್ನು ಬರೆಯುವ ಮೊದಲು ತಾಲೂಕು ಜಿಲ್ಲೆ ಹಾಗೂ
ರಾಜ್ಯಮಟ್ಟದ ಮಾದರಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳನ್ನು ಪಡೆದು ಇನ್ನೂ ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಫರ್ಪಮೆನ್ಸು ನೀಡಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿರುವಿರಿ ಈ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒಳ್ಳೆಯ ಫಲಿತಾಂಶ ನಿಮ್ಮ ಮುಂದಿನ ಕಲಿಕೆಗೆ ತೆರೆದ ಬಾಗಿಲಾಗಿದೆ.ನಿಮ್ಮ ಕಲಿಕಾಯಾನಕ್ಕೆ ಅರ್ಹತೆಯನ್ನು ಪಡೆಯುವ ಸಾಧನಾ ಮಾರ್ಗವಾಗಿದೆ. ಅಂತೂ ತಾವೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿ ಈ ಬಾರಿಯ ಶೈಕ್ಷಣಿಕ ವರ್ಷದ ಆರಂಭದಿಂದಲೇ ವೇಳಾಪಟ್ಟಿ ಯನ್ನು ಮಾಡಿಕೊಂಡು ಸತತ ಪರಿಶ್ರಮವಿಟ್ಟು ಶ್ರಧ್ಧೆಯಿಟ್ಟು ಸಮಯ ಪಾಲನೆ ಮಾಡಿಕೊಂಡು ಕಲಿಕೆಯಲ್ಲಿ ಶಿಸ್ತು ಬದ್ಧತೆಯನ್ನು ಇರಿಸಿಕೊಂಡು ಕಲಿಯುತ್ತಿರುವಿರಿ ಜೊತೆಯಲ್ಲಿ ಗುರುಗಳ ಸಹಕಾರ ಹೆತ್ತವರ ಪ್ರೋತ್ಸಾಹದಿಂದ ಚೆನ್ನಾಗಿ ಕಲಿಯುತ್ತಲೇ ಅವರ ಆಶೀರ್ವಾದ ಪಡೆದಿರುವಿರಿ. ಈಗಾಗಲೇ ತರಗತಿಯಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿರುವಿರಿ ಇಲ್ಲವೇ ಗಳಿಸಿದ ಅಂಕಗಳಲ್ಲಿ ಒಂದಿಷ್ಟು ಏರುಪೇರುಗಳಾದ್ದಾದರೂ ಆ ತಪ್ಪು ಗಳನ್ನು ತಿಳಿಸಿ ಗುರುಗಳಿಂದ ಉತ್ತರ ಕೇಳಿ ಮತ್ತೆ ಆ ತಪ್ಪು ಪುನರಾವರ್ತನೆ ಆಗದಂತೆ ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಿ.
ಇದೀಗ ನೀವು ಇದೇ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪರೀಕ್ಷಾರ್ಥಿಗಳಾಗಿ ಸಿದ್ಧರಾಗಿದ್ದೀರಿ. ಎಲ್ಲರೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪ್ರೀತಿ ಅಭಿಮಾನದಿಂದ ಶುಭ ಹಾರೈಸುವೆನು.
ವಿದ್ಯಾರ್ಥಿಗಳೇ ನೆನಪಿರಲಿ ಅಧ್ಯಯನ ,ಜ್ಞಾನ ಸಂಪಾದನಾ ಹಾಗೂ ಮೌಲ್ಯಮಾಪನ ಇವು ಒಬ್ಬ ವಿದ್ಯಾರ್ಥಿ ಎನಿಸಿಕೊಂಡ ಮೇಲೇ ಅವನು ಕಂಡುಕೊಳ್ಳಬೇಕಾದ ಮುಖ್ಯ ಅಂಶಗಳಾಗಿವೆ. ಹಾಗಾಗಿ ಪರೀಕ್ಷೆ ಎಂದಾಕ್ಷಣ ಬಹಳ ಖುಷಿಯಿಂದ ಅದನ್ನು ಸ್ವೀಕರಿಸಿಕೊಂಡು ತನ್ನ. ಜ್ಞಾನದ ಎಲ್ಲೆಯನ್ನು ಇನ್ನಷ್ಟು. ವಿಸ್ತರಿಸಿಕೊಳ್ಳಬೇಕು. ಕಲಿಕೆ ಎನ್ನುವುದು ಅದು ನಿರಂತರ ಪ್ರಕ್ರಿಯೆ . ಇದರಲ್ಲಿ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ತನ್ನ ಐಕ್ಯೂಗಳಲ್ಲಿ ಏರುಪೇರುಗಳಿರಬಹದು. ಆದರೆ ಯಾರು ಕೂಡ ಏನೂ ತಿಳಿಯದವರಲ್ಲ . ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷ ಧೀ ಶಕ್ತಿ ಇದ್ದೆ ಇರುತ್ತದೆ. ಎಲ್ಲರೂ ಜಾಣರೇ ಹೌದು. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತಾಳುವಿರಿ. ಹಾಗೇ ಮಾಡದೇ ಚೆನ್ನಾಗಿ ಕಲಿಯಿರಿ. ವಿದ್ಯಾರ್ಥಿ ಎನಿಸಿದವನಲ್ಲಿ ಏಕಾಗ್ರತೆ ,ಶ್ರಧ್ಧೆ ಹಾಗೂ ಸಮಯ ವಿಸ್ಮಯಯವಾಗಿಸಿಕೊಳ್ಳಲು ಅರಿತುಕೊಂಡಿರಬೇಕು. ಒಳ್ಳೆಯ ಅವಕಾಶಗಳು ಬಂದಾಗ ಅವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಗುರುಗಳ ಕೃಪೆಗೆ ಒಳಗಾಗಿ ತಮ್ಮ ಜ್ಞಾನದಾಹವನ್ನು ತೀರಿಸಿಕೊಳ್ಳಬೇಕು.ಹಾಗಾಗಿ ನಿಮ್ಮ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಬೇಕೆಂದರೆ ಈಗಾಗಲೇ ಓದುವ ಪಠ್ಯ ವಿಷಯಗಳನ್ನು ಮಾಡಿದ ಟಿಪ್ಪಣಿಗಳನ್ನು ಅಧ್ಯಯನ ಮಾಡಬೇಕು. ಹಾಗೆಯೇ ಏಕಾಗ್ರತೆ ಯನ್ನು ಸಂಪಾದಿಸಿಕೊಳ್ಳಬೇಕು. ಜೊತೆಯಲ್ಲಿ ಸಮಯದ ಪಾಲನೆ ಅತ್ಯಗತ್ಯ.ವೇಳಾಪಟ್ಟಿಯ ಮಾರ್ಗದರ್ಶನ ನಿಮ್ಮಲ್ಲಿರಬೇಕು ಆದರೆ ಸುಂದರ ಸಮಯವನ್ನು ಅನಗತ್ಯವಾಗಿ ವ್ಯರ್ಥವಾಗಲು. ಬಿಡಬಾರದು. ಹೀಗೆಯೇ ದಿನದ ದಿನದ ದಿನಚರಿಯನ್ನು ಅರ್ಥಪೂರ್ಣವಾಗಿ ಮುಂದುವರಿಸಿದ್ದೀರಿ ಎಂದಾದರೆ ಪರೀಕ್ಷೆ ಅದೊಂದು ಹಬ್ಬವೇ ಎಂದು ನೀವೇ ಒಪ್ಪಿಕೊಳ್ಳುವಿರಿ.ಚೆನ್ನಾಗಿ ಉತ್ತರಿಸುವ ಅಂದವಾಗಿ ಬರೆಯುವ ಉತ್ಸಾಹ ನಿಮ್ಮಲ್ಲಿ ಇರಲಿ. ಹಾಗಾಗಿ ಪರೀಕ್ಷೆ ಅದೊಂದು ಹಬ್ಬ ಸಂಭ್ರಮ ಹೌದು ಈ ಹಬ್ಬದ ಸಂಭ್ರಮದಲ್ಲಿ ಆತ್ಮವಿಶ್ವಾಸ ಮತ್ತು ಯಶಸ್ಸುಗೊಳ್ಳುವೆನೆಂಬ
ಅಚಲವಾದ ನಂಬಿಕೆಯಿಂದ ಇಟ್ಟುಕೊಳ಼್ಳಬೇಕು. ಹಾಗಾಗಿ ಇನ್ನೂ ಪರೀಕ್ಷೆಗೆ ಕೆಲವೇ ದಿನಗಳೂ ಉಳಿದಿದೆಯಾದರೂ ನಿಮ್ಮಲ್ಲಿ ನೀವೇ ಸಂಕಲ್ಪ ಮಾಡಿಕೊಂಡು ಈ ಪಬ್ಲಿಕ್ ಪರೀಕ್ಷೆಯನ್ನು ಗೆದ್ದೆ ಗೆಲ್ಲುವೆಂಬ ಪ್ರಾಮಾಣಿಕ ಸಾಧನೆ ಮಾಡಿರಿ ಖಂಡಿತ ಗೆಲುವು ಸಾಧಿಸುವಿರಿ.
ಈಗಾಗಲೇ ಪರೀಕ್ಷೆ ಬರೆಯುವ ಪಠ್ಯ ವಿಷಯದ ಟಿಪ್ಪಣಿ ನಿಮ್ಮಲ್ಲಿ ಇದೆ. ಹಾಗೆಯೇ ಜೊತೆಯಲ್ಲಿ ಎಲ್ಲಾ ಪಠ್ಯ. ವಿಷಯಗಳ ಶಿಕ್ಷಕರು ನಿಮಗೆ ಮಾರ್ಗದರ್ಶನ ಮಾಡುತ್ತಲೇ ಇದ್ದಾರೆ. ಪ್ರತೀ ಮಕ್ಕಳು ಪರೀಕ್ಷೆ ಬರೆಯಬೇಕು ಆ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ ಗೊಳ್ಳಬೇಕೆಂಬ ಅಪಾರವಾದ ಉತ್ಕಟ ಆಸೆ ಎಲ್ಲರಿಗೂ ಇದೆ ಹಾಗೆಯೇ ಪೋಕರು ಕೂಡ ನಿಮ್ಮ ಮೇಲೆ ತುಂಬಾ ಪ್ರೀತಿ ತೋರಿ ಸರ್ವ ಸಹಕಾರ ನೀಡುತ್ತಿದ್ದಾರೆ . ಅವರ ಈ ಎಲ್ಲಾ ಪ್ರೀತಿಗೆ ನಿಮ್ಮ ಸಾಧನೆಯೇ ಕೃತಜ್ಞತೆಯಾಗಬೇಕು . ಆದ್ದರಿಂದ ಇನ್ನೂ ಕಾಲ ಮಿಂಚಿಲ್ಲ. ಸಾಧನೆಯಲ್ಲಿ ಮಗ್ನರಾಗಿರಿ ಮತ್ತೆ ಮಿಂಚಿದ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಆದ್ದರಿಂದ ನೀವೂ ಕೂಡ ತನ್ನ ಓದು ಹಾಗೂ ತನ್ನ ಓದಿನಲ್ಲಿ ಏನಾದರೂ ಕೇಳಿರುವ ಪ್ರಶ್ನೆಯಲ್ಲಿ ಸಂದೇಹ ಬಂದರೆ ಕೂಡಲೇ ನಿವಾರಣೆ ಮಾಡುತ್ತಾ ಎಲ್ಲಾ ಸಮಸ್ಯಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊ಼ಳ್ಳಬೇಕು. ಹಾಗೆಯೇ ಓದಿದ ವಿಷಯವನ್ನು ಬರೆಯುವಲ್ಲಿ ಸುಂದರವಾದ ಕೈ ಬರೆಹ ಇರಬೇಕು ಎಂಬುದನ್ನು ಮರೆಯಬೇಡಿ . ಪರೀಕ್ಷಾ ಹಳೆಯಲ್ಲಿ ಉತ್ತಮವಾಗಿ ಬರೆದು ಉತ್ತರಿಸಿ ಉತ್ತಮ ಅಂಕಗಳನ್ನು ಪಡೆಯುವುದೆಂದರೆ ಅದೇನೂ ಹರಸಾಹಸಲ್ಲ . ಅದೊಂದು ಸಿದ್ಧಿಸಿಕೊಂಡ ಅಭ್ಯಾಸ ಕ್ರಮವಾಗಬೇಕು.ಹಾಗಾಗಿ ಪ್ರತೀ ಪ್ರಶ್ನೆಗಳಿಗೆ ಉತ್ತರವನ್ನು. ಕಂಡುಕೊಳ್ಳುವುದಕ್ಕೆ ನೀವೂ ಮನ ಮಾಡಮಾಡಿರಿ. ಈಗಾಗಲೇ ಹೇಳಿದಂತೆ ಪರೀಕ್ಷೆ ಎನ್ನುವುದು ಅದೊಂದು ಹಬ್ಬ. ಆ ಹಬ್ಬದಲ್ಲಿ ಈಗಾಗಲೇ ಓದಿರುವ ವಿಷಯವನ್ನು ನೀವೂ ಬರೆದು ಸಂಭ್ರಮಿಸುವುದು ನಿಮ್ಮ ಹಕ್ಕು.ಆದ್ದರಿಂದ ಪ್ರತಿಯೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.
ವಿದ್ಯಾರ್ಥಿಗಳೇ…ಒಂದು ಸಂಗತಿ ನೆನಪಿಟ್ಟುಕೊಳ್ಳಿ ದೇವರು ಖಂಡಿತ ಕೈ ಬಿಡಲಾರ. ಜೀವನದಲ್ಲಿ ಯಶಗೊಳ್ಳಲು ಒಂದು ದಾರಿ ಸದಾ ತೋರುವನು ಎಂಬ ನಂಬಿಕೆ ಇರಲಿ ಆತನ ಕೃಪಾಶೀರ್ವಾದಿ ಸುಂದರ ಬದುಕಿಗೆ ದಾರಿ ತೋರಿಸಿ ಕೊಡುವನು. ಹಾಗಾಗಿ ವಿದ್ಯಾರ್ಥಿಗಳೇ ಪರೀಕ್ಷೆಯ ಓದಿನಲ್ಲಿ ಸೋಮಾರಿತನ ಮಾಡದಿರಿ. ಪ್ರತೀ ಪ್ರಶ್ನೆ ಪತ್ರಿಕೆಗಳಲ್ಲಿ ಕೊಟ್ಟಿರುವ ಪ್ರಶ್ನೆ ಗಳಿಗೆ ಉತ್ತರಿಸುವ ನಿಮ್ಮ ಬೌದ್ದಿಕ ಸಾಮರ್ಥ್ಯದ ಮಟ್ಟಕ್ಕನುಗುಣವಾಗಿ ಬಂದ ಎಲ್ಲಾ ಟಾಸ್ಕ್ ಗಳನ್ನು ಎದುರಿಸಿ ಗೆಲ್ಲುವ ಸಂಭ್ರಮ ನಿಮ್ಮದಾಗಿರಲಿ .ಅದು ಸತತ ಪರಿಶ್ರಮಕ್ಕೆ ಸಂದ ಗೆಲುವಿನ ಸಂಭ್ರಮವೆನಿಸುವುದು. ಹಾಗಾಗಿ ಇನ್ನೂ. ಯಾವುದೇ ರೀತಿಯಲ್ಲಿ ಯೋಗ್ಯ ಸಮಯವನ್ನು ಹಾಳು ಮಾಡದೇ ಓದು ಬರೆವಣಿಗೆಗೆ ಮೀಸರಿಸಿರಿ. ಈ ಬಾರಿಯ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ನೀವು ಗೆಲ್ಲಬೇಕು ಎಲ್ಲರ ಪ್ರೀತಿಗೆ ಪಾತ್ರರಾಗಬೇಕು. ಪರೀಕ್ಷೆ ಎಲ್ಲರೂ ಬರೆಯಃವರು ನಾನು ಬರೆಯುವೆ ಅದರಲ್ಲಿ ಯಶಸ್ಸುಗೊಳ್ಳುವೆ ಎಂಬ ನಂಬಿಕೆ ಇರಿಸಿ ಮುನ್ನಡೆಯಿರಿ .ಮೊದಲಾಗಿ ನಿಮ್ಮ ಸಾಮರ್ಥ್ಯದ ಮೇಲೆ ನೀವೇ ನಂಬಿಕೆ ಇರಿಸಿಕೊಳ್ಳಿ. ಹಾಗಾಗಿ ಪಠ್ಯ ಪುಸ್ತಕ ಟಿಪ್ಪಣಿ ಪುಸ್ತಕ ಮಾದರಿ ಪ್ರಶ್ನೆ ಪತ್ರಿಕೆಗಳ ಮೂಲಕ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು. ಕಂಡುಕೊಂಡು ಮುಂದೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪಬ್ಲಿಕ್. ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಿಸಿ ಖುಷಿಪಡಿರಿ.ಸರಿಯಾದ ಆಹಾರ ದೇಹಾರೋಗ್ಯಕ್ಕೆಅವಶ್ಯವೆನಿಸಿದ ಷ್ಟು ನಿದ್ದೆ ಇರಲಿ. ಸಾಧಿಸಬೇಕೆಂಬ ಕನಸನ್ನು ಕಾಣುತ್ತಲೇ ಇರಿ.
ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪುವ ಬಗ್ಗೆಯೂ ಮಾನಸಿಕವಾಗಿ ಸಿದ್ಧರಾಗಿರಿ .ಪರೀಕ್ಷೆಯ ದಿನದಂದೂ ಆತುರ ಒತ್ತಡ ಉದ್ವೇಗ ಯಾವೂದೂ ಬೇಡ . ಖುಷಿಯಾಗಿ ಪರೀಕ್ಷೆ ಬರೆಯಿರಿ.
ವಿದ್ಯಾರ್ಥಿ ಎಂದ ಮೇಲೆ ನೀವು ಬರೆಯುವ ಪರೀಕ್ಷೆ ಅದೊಂದು ರೋಚಕವಾದುದು ಅದರಲ್ಲೂ ಒಂದು ಥ್ರಿಲ್ ಇದೆ ಎಂದು ಖುಷಿಪಡಿರಿ. ಹಾಗಾಗಿ ನೆನಪಿರಲಿ ಇದೊಂದು ಒಳ್ಳೆಯ ಅವಕಾಶ ಮೊದಲ ಪ್ರಯತ್ನದಲ್ಲೇ ಕ್ಲಿಕ್ ಆಗಿಬಿಡಿ. ಇದು ಜೀವನ ಪರೀಕ್ಷೆಯಲ್ಲ ಆದರೆ ಕಲಿಕಾ ಪರೀಕ್ಷೆ ಎನ್ನುವುದು ಮರೆಯದಿರಿ . ಕಲಿತ ವಿದ್ಯೆಯ ಮೌಲ್ಯಮಾಪನ ನಡೆಯಲಿದೆ ಮೂಲಕ ನಿಮ್ಮ. ಜ್ಞಾನದ ಶಕ್ತಿ ಕೌಶಲ್ಯದ ತಂತ್ರ ಮತ್ತು ಭವಿಷ್ಯದ ಜೀವನದಲ್ಲಿ ದೇಶದ ಆಸ್ತಿಯಾಗಿ ಬರುವ ಎಲ್ಲಾ ಅತುಲ್ಯ ನಂಬಿಕೆಯನ್ನು ಹೊಂದಿರಿ. any ಇನ್ನೂ ಇರುವ ಕೆಲವೇ ಕೆಲವು ದಿನಗಳಲ್ಲಿ ಚೆನ್ನಾಗಿ ಓದಿ ಉತ್ತಮ ಅಭ್ಯಾಸ ಮಾಡಿರಿ ಸಾಧನೆಯನ್ನು ಮಾಡಿರಿ ಹಿರಿಯ ಆಶೀರ್ವಾದ ಕಿರಿಯ ಪ್ರೀತಿಯನ್ನು ಗಳಿಸಿರಿ
ದೇಶದ ಸತ್ಪ್ರಜೆಯಾಗಿ ಬಾಳಿರಿ.
ಹಾ ಅಂತೆಯೇ ಮುಂದೆ ಪರೀಕ್ಷಾ ಫಲಿತಾಂಶದ ದಿನದಂದು ನೀವೂ ಸಂಭ್ರಮಿಸಲು ನಾವೆಲ್ಲರೂ ಕೂಡ ಸಂಭ್ರಮಿಸುವೆವು. ಶುಭವಾಗಲಿ
ಸಾಧನೆಗೆ ಅಚಲವಾದುದು ಯಾವೂದೂ ಇಲ್ಲ ಆದರೆ ಸಾಧಿಸುವ ಛಲ ನಿಮ್ಮಲ್ಲಿರಲಿ
ಮತ್ತೊಮ್ಮೆ ನನ್ನ ಪ್ರೀತಿಯ ಎಸ್ಸೆಸ್ಸೆಲ್ಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು all the best






















































