
ಹುಬ್ಬಳ್ಳಿ: ರಾಜ್ಯದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ಮಾಂಸ ಹಾಗೂ ಮೊಟ್ಟೆ ಮಾರಾಟದಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು ರಾಯಚೂರು ಜಿಲ್ಲೆಗೆ ಆಂಧ್ರ, ತೆಲಂಗಾಣದಿಂದ ಕೋಳಿಗಳ ಆಮದು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಸ್ಥಳೀಯ ಕೋಳಿ ಫಾರಂ ಗಳಿಗೂ ಬೇಡಿಕೆ ಕುಸಿತಗೊಂಡಿದ್ದು ಚಿಕನ್ ಬದಲು ಮಟನ್ ಬೇಡಿಕೆ ಹೆಚ್ಚಾಗಿದೆ.
ಹೋಟೆಲ್, ರೆಸ್ಟೋರೆಂಟ್, ಡಾಬಾ ಗಳಲ್ಲೂ ಚಿಕನ್ ಗೆ ಸಂಬಂಧಿಸಿದ ಆಹಾರ ಪದಾರ್ಥಗಳ ತಯಾರಿಕೆಯನ್ನು ನಿಲ್ಲಿಸಿದ್ದು ಅಲ್ಲದೆ ಆಮ್ಲೆಟ್ ಗೂ ಬೇಡಿಕೆ ಕಡಿಮೆಯಾಗಿದೆ.
ಕೊಪ್ಪಳದಲ್ಲಿ ಚಿಕನ್ ಬೇಡಿಕೆ ಶೇಕಡ 5ರಷ್ಟು ಕುಸಿದಿದ್ದು ಆದರೆ ಹಕ್ಕಿ ಜ್ವರ ಭೀತಿ ಇದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ರವಿವಾರದಂತೆ 1 ಲಕ್ಷ ಕೆಜಿ ಚಿಕನ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.






















































