“ಕವಿ ಸರ್ವಜ್ಞ ಜಯಂತಿ-2025”

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಸಹಯೋಗದೊಂದಿಗೆ,”ಕವಿ ಸರ್ವಜ್ಞ ಜಯಂತಿ-2025″ ಫೆ. 20ರಂದು ಗುರುವಾರ, ಬೆಳಿಗ್ಗೆ 10 ಗಂಟೆಯಿಂದ ಯು. ಕಮಲಬಾಯಿ ಪ್ರೌಢಶಾಲೆ ಕಡಿಯಾಳಿ, ಉಡುಪಿ ಇಲ್ಲಿ ನಡೆಯಲಿದೆ.
ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್, ಗಣ ಉಪಸ್ಥಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಗಿ, ಅಧ್ಯಕ್ಷತೆ ಶಾಸಕ ಯಶ್ ಪಾಲ್.ಎ. ಸುವರ್ಣ, ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಬಿ ವೈ ರಾಘವೇಂದ್ರ, ಶಾಸಕರಾದ ವಿ ಸುನಿಲ್ ಕುಮಾರ್, ಶಾಸಕ ಎಸ್ ಎಲ್ ಭೋಜೇಗೌಡ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಕುಮಾರ್ ಪುತ್ತೂರು, ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಯಾದ ಸತ್ಯವತಿ ಜಿ. ಮತ್ತಿತರರ ಉಪಸ್ಥಿತಿ ಇರಲಿದೆ.
ಅತಿಥಿಗಳಾಗಿ ಕುಲಾಲ್ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಕಾಳು ಕುಲಾಲ್, ಯು ಕಮಲಾಭಾಯಿ ಪ್ರೌಢಶಾಲೆ ಕಡಿಯಾಳಿ ಇದರ ಮುಖ್ಯೋಪಾಧ್ಯಾಯರಾದ ಸುದರ್ಶನ ನಾಯಕ್
ಸಾರ್ವಜನಿಕ ಶಿಕ್ಷಣ ಇಲಾಖೆ, ನಿವೃತ್ತ ಜಂಟಿ ನಿರ್ದೇಶಕರಾದ ಶೇಖರ್ ಕುಲಾಲ್ ಇವರಿಂದ ಉಪನ್ಯಾಸ ನಡೆಯಲಿದೆ.




















