
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ 1800 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿಗೆ ಅಧಿಕಾರ ಬರುವುದು ಖಚಿತವಾಗುತ್ತಿದ್ದಂತೆ ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ ಎಎಪಿ ಮತ್ತು ಕೇಜ್ರಿವಾಲ್ ಗೆ ಇ ಬಾರಿ ಹಿನ್ನಡೆಯಾಗಿದೆ.
ಜಂಗ್‌ಪುರದಿಂದ ಬಿಜೆಪಿ ಅಭ್ಯರ್ಥಿ ತರವಿಂದರ್ ಸಿಂಗ್ ಅವರು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಸೋಲಿಸಿದ್ದಾರೆ.




















