
ಇಂದು ನಮಗೆ ಗೊತ್ತಿಲ್ಲದಂತೆ ಅನೇಕ ಯುವಕ, ಯುವತಿಯರು ವಿಶೇಷವಾಗಿ ವಿದ್ಯಾರ್ಥಿಗಳು ಡ್ರಗ್ಸ್ ನ ದಾಸರಾಗುತ್ತಿದ್ದಾರೆ. ಇದರಿಂದಾಗಿ ದೇಹದ ಆರೋಗ್ಯ ತಮ್ಮ ಆರೋಗ್ಯ ಮಾತ್ರವಲ್ಲದೆ ತಮ್ಮ ಸಂಸಾರ, ದೇಶ ಎಲ್ಲದರ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ಡ್ರಗ್ಸ್ ನಿಂದ ಆಗುವ ಅಡ್ಡ ಪರಿಣಾಮಗಳನ್ನು ತಿಳಿದು ದೂರವಿರಿ. ಇಂದು ಅದಕ್ಕೋಸ್ಕರ ಡ್ರಗ್ಸ್ ಪರಿಣಾಮಗಳ ಬಗ್ಗೆ ನಡೆಸಿದ ಕಾರ್ಯಕ್ರಮ ಸ್ತುತ್ಯಾರ್ಹ ಎಂದು ಜೇಸಿ ಶಿವಕುಮಾರ್ ಹೇಳಿದರು.
ಅವರು ಜೆಸಿಐ ಕಾರ್ಕಳ ವಿದ್ಯಾರ್ಥಿಗಳಿಗೋಸ್ಕರ ಡ್ರಗ್ಸ್ ದುಷ್ಪರಿಣಾಮ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಈ ಮಾತನ್ನು ಹೇಳಿದರು.
ಜೇಸಿ ಜೆಸಿಐ ಕಾರ್ಕಳದ ಅಧ್ಯಕ್ಷ್ಯೆ ಶ್ವೇತಾ ಜೈನ್ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಜೇಸಿ ಪ್ರಚೇತ್, ಜೇಸಿ ಸುದರ್ಶನ್ ಶೆಟ್ಟಿ, ಜೇಸಿ ದಿವ್ಯಸ್ಮಿತಾ, ಜೇಸಿ ರೇವತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.




















