
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.
ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10:05ಕ್ಕೆ ಆಗಮಿಸಲಿದ್ದು, ಅಲ್ಲಿಂದ ಬೆಳಗ್ಗೆ 10:10ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10:45 ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದ್ದಾರೆ. 10:50ಕ್ಕೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಬೆಳಗ್ಗೆ 11:00 ರಿಂದ 11:30ರ ವರೆಗೆ ಸಂಗಮ್ ಘಾಟ್‌ನಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.





















