
ಶ್ರೀ ಕ್ಷೇತ್ರ ಕಾಂತಾವರದಲ್ಲಿ ಕಾಂತೇಶ್ವರ ಸ್ವಾಮಿಯ
ಮಹಾರಥೋತ್ಸವವು ಮಂಗಳವಾರ ಸಂಪನ್ನಗೊAಡಿತು.
ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ಟರ ಮಾರ್ಗದರ್ಶನದಲ್ಲಿ,
ಧರ್ಮದರ್ಶಿ ಡಾ. ಕೆ. ಜೀವಂಧರ ಬಲ್ಲಾಳರ ಉಪಸ್ಥಿತಿಯಲ್ಲಿ ಊರ
ಪರವೂರ ಭಕ್ತರ ಸಹಕಾರದಿಂದ ಒಂಬತ್ತು ದಿನಗಳ ಜಾತ್ರೆ
ಸಂಪನ್ನವಾಯಿತು.
ಉತ್ಸವ ಸಮಿತಿ ಅಧ್ಯಕ್ಷರಾದ ಜಯವರ್ಮ ರಾಜ್
ಬಲ್ಲಾಳ್, ರಾಜವರ್ಮ ರಾಜ್ ಬಲ್ಲಾಳ್, ಕಾರ್ಕಳ ಶಾಸಕ ವಿ. ಸುನಿಲ್
ಕುಮಾರ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್ ಕೋಟ್ಯಾನ್,
ಎಕ್ಸೆಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಅಶೋಕಾನಂದ
ಶೆಟ್ಟಿ ಬೇಲಾಡಿ, ರಮಾನಂದ ಶೆಟ್ಟಿ ಮುಂಬೈ ಮತ್ತಿತರರು
ಭಾಗವಹಿಸಿದ್ದರು.






























































































































