28.8 C
Udupi
Wednesday, May 6, 2026
spot_img
spot_img
HomeBlogಜೆ.ಸಿ.ಐ ಕಾರ್ಕಳದ 2025 ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

ಜೆ.ಸಿ.ಐ ಕಾರ್ಕಳದ 2025 ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

ಜೆಸಿ ಸಂಸ್ಥೆಯಿಂದ ರಾಷ್ಟ್ರಮಟ್ಟದ ಅಭಿವೃದ್ಧಿ ಸಾಧ್ಯ: ಅಭಿಲಾಶ್ ಬಿ.ಎ

ಅಧ್ಯಕ್ಷರ ಮೊದಲ ಕಾರ್ಯಕ್ರಮದ ಆಯೋಜನೆ ಮೆಚ್ಚುವಂಥದ್ದು: ಜೆಸಿ ಚಿತ್ತರಂಜನ್ ಶೆಟ್ಟಿ

52 ವರ್ಷಗಳಿಂದ ಸಮಾಜಮುಖಿ ಕಾರ್ಯಗಳಿಗೆ ಹೆಸರಾದ ಸಂಸ್ಥೆ: ವೃಷಭ ರಾಜ್ ಕಡಂಬ

ಜೆ ಸಿ ಐ ಕಾರ್ಕಳದ 2025 ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಜನವರಿ 23 ಗುರುವಾರ ಜೆ ಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಜೆಸಿಐ ಸೆನೆಟರ್ ಅಭಿಲಾಶ್ ಬಿ ಎ ವಲಯ ಅಧ್ಯಕ್ಷರು 2025 , ಗೌರವ ಅತಿಥಿಗಳಾಗಿ ಚಿತ್ತರಂಜನ್ ಶೆಟ್ಟಿ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಜೆಸಿ ವೃಷಭ ರಾಜ್ ಕಡಂಬ ಜೆ ಸಿ ಕಾರ್ಕಳದ ಪೂರ್ವ ಅಧ್ಯಕ್ಷರು ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ವಿಘ್ನೇಶ್ ಪ್ರಸಾದ್ ಇವರನ್ನು ಜೆಸಿ ಮುರಳಿದರ್ ಭಟ್ ಇವರು ಪೂರ್ವಾಧ್ಯಕ್ಷರ ಸಾಲಿಗೆ ಸೇರಿಸಿದರು

ನಿಯೋಜಿತ ಅಧ್ಯಕ್ಷರಾದ ಜೆಸಿ ಶ್ವೇತಾ ಎಸ್ ಜೈನ್ ಅವರಿಗೆ ಜೆಸಿ ಪ್ರಚೀತ್ ಕುಮಾರ್ ಇವರು ಅಧಿಕಾರ ಹಸ್ತಾಂತರಿಸಿದರು ಹಾಗೂ ಪ್ರಮಾಣವಚನವನ್ನು ನೆರವೇರಿಸಿದರು
ನೂತನ ಪದಾಧಿಕಾರಿಗಳಿಗೆ ನೂತನ ಅಧ್ಯಕ್ಷರಿಂದ ಪ್ರಮಾಣವಚನ ನೆರವೇರಿತು ಹಾಗೂ ಹೊಸ ಜೆಸಿ ಸದಸ್ಯರಿಗೆ ವಲಯ ಅಧ್ಯಕ್ಷರಿಂದ ಪ್ರಮಾಣವಚನ ನೆರವೇರಿಸಲಾಯಿತು.

ವಲಯ 15 ರ ವಲಯ ಅಧ್ಯಕ್ಷರಾದ ಜೇಸಿಐ ಸೆನೆಟರ್ ಅಭಿಲಾಶ್ ಬಿ ಎ ಮಾತನಾಡಿ,ಇರುವಂಥ 365 ದಿನವನ್ನು ಅಧ್ಯಕ್ಷರು ಹೇಗೆ ಸದುಪಯೋಗ ಪಡಿಸಿಕೊಳ್ಳು ತ್ತಾರೆ ಎನ್ನುವುದೇ ಪಾಠ ಜೆಸಿ ಸಂಸ್ಥೆಯಿಂದ ನಿಮ್ಮ ಬೆಳವಣಿಗೆ,ಸಂಸ್ಥೆಯ ಬೆಳವಣಿಗೆ,ವಲಯ ಮತ್ತು ರಾಷ್ಟ್ರದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪೂರ್ವ ವಲಯ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಮಾತನಾಡಿ,ನೂತನ ಅಧ್ಯಕ್ಷರ ಪ್ರಥಮ ಆಯೋಜನೆಯ ಕಾರ್ಯಕ್ರಮ ಮೆಚ್ಚುವಂತದ್ದು,ಕೊನೆಯ ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟಮಟ್ಟದ ನಾಯಕತ್ರ್ವ ನಿಮ್ಮದಾಗಲಿ ಎಂದು ಶುಭಹಾರೈಸಿದರು.ಕಾರ್ಕಳ ಜೇಸಿ ಯ ಪೂರ್ವಾಧ್ಯಕ್ಷರಾದ ಜೆಸಿ ವೃಷಭರಾಜ್ ಕಡಂಬ ಮಾತನಾಡಿ,52 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮ ನೀಡಿದ ಹೆಮ್ಮ ಕಾರ್ಕಳ ಜೇಸಿಯದ್ದು ಎಂದರು.

ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ವತಿಯಿಂದ ಅಂಗವಿಕಲರಿಗೆ ದೇಣಿಗೆಯನ್ನು ನೀಡಲಾಯಿತು
ಮಾಧ್ಯಮ ಕ್ಷೇತ್ರದ ನಮ್ಮ ಕಾರ್ಲ ಸಂಪಾದಕರಾದ ಅರ್ಚನಾ ವಿಜೇಶ್ ಶೆಟ್ಟಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರಾದ ಜೆಸಿ ಶ್ವೇತಾ ಎಸ್ ಜೈನ್, ಕಾರ್ಯದರ್ಶಿ ಜೆಎಫ್ಎಂ ಸುಶ್ಮಿತಾ ರಾವ್, ಲೇಡಿ ಜೇಸಿ ಸಂಯೋಜಕರಾದ ಜೆಎಫ್ಎಂ ಶಾಹೀನ ರಿಜ್ವಾನ್ ಖಾನ್ ಹಾಗೂ ಜೂನಿಯರ್ ಜೆಸಿ ಚೇರ್ ಪರ್ಸನ್ ಜೆಜೆಸಿ ಅಭಿಜ್ಞಾ ಆರ್ ವರ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಲಯ ಅಧಿಕಾರಿಗಳು ಪೂರ್ವ ವಲಯ ಅಧ್ಯಕ್ಷರು ಪೂರ್ವ ವಲಯ ಉಪಾಧ್ಯಕ್ಷರು ಪೂರ್ವ ವಲಯ ಅಧಿಕಾರಿಗಳು ಘಟಕದ ಪೂರ್ವ ಅಧ್ಯಕ್ಷರು ಜೆ ಸಿ ಜೆಸಿ ಯೇತರ ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page