
ಕೋಲಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಗರದ ಎಸ್.ಎನ್.ಆರ್ ಆಸ್ಪತ್ರೆ ಸಭಾಂಗಣದಲ್ಲಿ ಗೃಹ ಆರೋಗ್ಯ ಯೋಜನೆಯ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ಸಿಗುವ ನಿರೀಕ್ಷೆ ಇತ್ತು, ಇಡಿ, ಸಿಬಿಐ, ಐಟಿ ಏನೇ ಬರಲಿ ಎದುರಿಸಲು ಸಿದ್ಧ ಎಂದಿದ್ದಾರೆ.
ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ಇತ್ತು. ಬಿಜೆಪಿಗೆ ಒಂದು, ಬೇರೆಯವರಿಗೆ ಒಂದು ಮಾನದಂಡವೇ? ಎಂದು ಪ್ರಶ್ನಿಸಿದ ಅವರು, ಸಿಎಂ ಹೆಸರಿಗೆ ಕಳಂಕ ತರಲು ಕೇಂದ್ರ ಸರ್ಕಾರದ ಸಂಚಾಗಿದೆ, ಇಡಿ, ಐಟಿ, ಸಿಬಿಐ ನಿಂದ ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿದ್ದಾರಾ, ಬಿಜೆಪಿಯವರಿಗೆ ಭ್ರಷ್ಟರಲ್ಲ ಅಂತ ಸರ್ಟಿಫಿಕೇಟ್ ಕೊಡಲಾಗಿದೀಯಾ ಎಂದು ಪ್ರಶ್ನಿಸಿದರು.





















