28.9 C
Udupi
Wednesday, May 6, 2026
spot_img
spot_img
HomeBlogಮಹಿಳೆಯ ವಿರುದ್ಧ ಸುಳ್ಳು ಆರೋಪ ಮಾಡಿದ ಹಿನ್ನೆಲೆ ಮಾನನಷ್ಟ ಪರಿಹಾರ ನೀಡಲು ತೀರ್ಪು ನೀಡಿದ ನ್ಯಾಯಾಲಯ

ಮಹಿಳೆಯ ವಿರುದ್ಧ ಸುಳ್ಳು ಆರೋಪ ಮಾಡಿದ ಹಿನ್ನೆಲೆ ಮಾನನಷ್ಟ ಪರಿಹಾರ ನೀಡಲು ತೀರ್ಪು ನೀಡಿದ ನ್ಯಾಯಾಲಯ

ಮಾಳ ಗ್ರಾಮದ ನಿವಾಸಿ ಚಂದ್ರಾವತಿ ಮತ್ತು ಆಕೆಯ ಪತಿ ಮೋನಪ್ಪ ಗೌಡ ಮುಡಾರು ಗ್ರಾಮದ ಲಕ್ಷ್ಮಿ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಕೆಲವು ಸಮಯದ ಬಳಿಕ ಮನೆ ಮಾಲಕಿ ಲಕ್ಷ್ಮಿ ಅವರು ಕೆಲಸದಾಳುಗಳು ತೋಟದಲ್ಲಿ ಅಡಕೆ ಕದಿಯುತ್ತಾರೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ವೇಳೆ ಅರ್ಜಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಕಾರಣಕ್ಕೆ ಅಂದಿನ ಠಾಣಾಧಿಕಾರಿ ಪ್ರಕರಣ ಮುಕ್ತಾಯಗೊಳಿಸಿದ್ದರು.

ಇದೀಗ ಚಂದ್ರಾವತಿ ಅವರು ತನ್ನ ಮೇಲೆ ಸುಳ್ಳು ದೂರಿನ ಪರಿಣಾಮ ನನ್ನ ಘನತೆಗೆ ಧಕ್ಕೆಯಾಗಿದ್ದು ಮಾತ್ರವಲ್ಲ ಸಮಾಜದಲ್ಲಿ ನಮ್ಮನ್ನು ಅನುಮಾನಸ್ಪದವಾಗಿ ನೋಡುತ್ತಿದ್ದಾರೆ. ಇದು ನನ್ನ ಮಗಳ ಮದುವೆಗೂ ಅಡ್ಡಿಯಾಗುತ್ತಿದ್ದು ಹೀಗಾಗಿ ತನಗೆ ಮಾನನಷ್ಟ ಪರಿಹಾರ ಒದಗಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯವು ಇದರ ವಿಚಾರಣೆ ನಡೆಸಿ ಲಕ್ಷ್ಮಿ ಮತ್ತು ಆಕೆಯ ಮಗಳು ಆರತಿ ಅಶೋಕ್ ಇಬ್ಬರು ಸೇರಿಕೊಂಡು ಎರಡು ತಿಂಗಳೊಳಗೆ ಚಂದ್ರಾವತಿಯವರಿಗೆ ಮಾನ ನಷ್ಟ ಪರಿಹಾರ ಹಾಗೂ ದಾವೆಯ ಖರ್ಚು ಸಹಿತ ಒಟ್ಟು 43,420 ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page