27.4 C
Udupi
Monday, May 4, 2026
spot_img
spot_img
HomeBlogಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ…

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ…

ಆಲೂರು : ಇದೊಂದು ಚಿಕ್ಕದಾದ ತಾಲೂಕು ಆದರೂ ಚೊಕ್ಕದಾದ ತಾಲೂಕು ಆಗುವಲ್ಲಿ ಆಲೂರು ಸ್ವತಂತ್ರ ವಿಧಾನಸಭಾ ಕ್ಷೇತ್ರ ಆಗಬೇಕು ಇಲ್ಲಿಯ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸುವಲ್ಲಿ ಸ್ವತಂತ್ರ ವಿಧಾನಸಭಾ ಕ್ಷೇತ್ರದ ಅಗತ್ಯವಿದೆಯೆಂದು ತಾಲೂಕು ಘಟಕದ ವತಿಯಿಂದ ನಡೆದ ಹೊಸಕೋಟೆ ಹೋಬಳಿ ಕೆಂಚಾಂಬಿಕ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ ತಾಲೂಕು ತೃತೀಯ ಕೇಂದ್ರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪತ್ರಕರ್ತರು, ಹಿರಿಯ ಸಾಹಿತಿಗಳು ಆದ ಲೀಲಾವತಿ ಅವರು ಆಘ್ರಹಿಸಿದರು.


ತಾಲೂಕಿನ ಆಸು ಪಾಸಿನಲ್ಲಿರುವ ಕೆಸಗೋಡು ಬೆಳಗೋಡು ಅಂಕಹಳ್ಳಿ ಗ್ರಾಮ ಪಂಚಾಯಿತಿಗಳು ಸಕಲೇಶಪುರ ತಾಲೂಕಿನ ದೂರವಿರುವ ಕೂಡ್ಲಿಪೇಟೆ ಕುರುಬತ್ತೂರು ಕಸಬಾ ಹೋಬಳಿ ಸಮೀಪವಿರುವ ಕಂದಲಿ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತದಾರರನ್ನು ಆಲೂರು ಪ್ರತ್ಯೇಕ ವಿಧಾನಸಭೆ ಕ್ಷೇತ್ರವನ್ನಾಗಿ ಮಾಡಲು ಅವಕಾಶವಿದೆ ಎಂದು ಸಲಹೆ ನೀಡಿದರು.


ತಾಲೂಕಿನಲ್ಲಿ ಜನಸಾಮಾನ್ಯರಿಗೆ ದೊರಕಬೇಕಾದ ಸರ್ಕಾರಿ ಸೌಲಭ್ಯಗಳಿವೆ. ಆದರೆ ರಾಜಕೀಯ ಇಚ್ಚಾ ಶಕ್ತಿ ಕೊರತೆಯಿಂದ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ತಾಲೂಕು ತಾಲೂಕು ಕೇಂದ್ರದಲ್ಲಿ ಮಾರುಕಟ್ಟೆ ಇಲ್ಲ ಕೈಗಾರಿಕೆ ಸ್ಥಾಪನೆ ಯಾದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ದೊರಕಬೇಕು, ರೈಲು ನಿಲ್ದಾಣವಿದ್ದರೂ ರೈಲುಗಳ ನಿಲುಗಡೆಯಾಗುತ್ತಿಲ್ಲ, ಎಲ್ಲ ಇಲ್ಲಗಳ ನಡುವೆಯೂ ಪ್ರಾಣಭಯದ ನಡುವೆಯೂ ತಾಲೂಕಿನ ಜನರ ಬದುಕು ಸಾಗಿದ್ದು ಮಾನವೀಯತೆ ಸರಳ ಸಜ್ಜನಿಕೆ, ಆದರ್ಶಗಳ ಜೊತೆಗೆ ಅನ್ನುವುದು ಅಭಿನಂದನಾರ್ಹಾ ಎಂದು ವಿಚಾರ ಪ್ರಸ್ತಾಪಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರವಿ ನಾಕಲಗೂಡು ಅವರು ಮಾತನಾಡಿ, ಸರ್ಕಾರಿ ಶಾಲೆಗಳು ನಶಿಸದಂತೆ ಪ್ರೋತ್ಸಾಹಿಸಬೇಕು, ಸರ್ಕಾರಿ ಶಾಲೆಗಳು ಜೀವಂತಿಕೆಯನ್ನು ಉಳಿಸಿಕೊಂಡಾಗ ಮಾತ್ರ ಕನ್ನಡ ಭಾಷೆಗೆ ಧಕ್ಕೆಯಾಗದೆ ಉಳಿದುಕೊಂಡಿತು, ಇಲ್ಲವಾದಲ್ಲಿ ಕನ್ನಡವನ್ನು ಪರಭಾಷೆಗಳು ಇಲ್ಲವಾಗಿಸುತ್ತವೆ, ಈ ನಿಟ್ಟಿನಲ್ಲಿ ನಾವೆಲ್ಲರೂ ನಿತ್ಯ ನಿರಂತರ ಕನ್ನ್ನಡ ಬಳಸುವುದರೊಂದಿಗೆ ಉಳಿಸುವ ಭಾಷಪ್ರೇಮಿಗಳಾಗಬೇಕಿದೆ ಎಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ವಿಶ್ವಾಸ್ ಡಿ ಗೌಡ ಅವರಿಂದ ರಚಿತವಾದ ಕೃತಿಯನ್ನು ನಾಗರಾಜ್ ಹೆತ್ತೂರ್ ಅವರು ಬಿಡುಗಡೆಗೊಳಿಸಿ, ವಿಶ್ವಾಸ್ ಅವರಲ್ಲಿ ಬರಹದ ಮೇಲಿನ ಪ್ರೀತಿಯೆ ಅವರೊರ್ವ ಅದ್ಬುತ ಬರಹಗಾರ ಅನ್ನುವುದನ್ನು ಸಾಬೀತುಪಡಿಸಿದೆ, ಮುಂದೆ ಕವಿತೆಗಳನ್ನೂ ಬರೆವ ಪ್ರಯತ್ನದೊಂದಿಗೆ ಮುನ್ನಡೆದರೇ ಯಶಸ್ವೀ ಕವಿಗಾರರಾಗಿ ಹೊರಹೋಮ್ಮುತ್ತೀರಿ ಎಂದು ಆತ್ಮಸ್ಥೈರ್ಯ ತುಂಬಿದರು. ವೇದಿಕೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಕಟ್ಟೆಗದ್ದೆ ನಾಗರಾಜ್ ಅವರು ಮಾತನಾಡುತ್ತಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಮ್ಮೆಲ್ಲರಿಗೂ ಸ್ಫೂರ್ತಿಯ ಚಿಲುಮೆ ಎಂದು ವೇದಿಕೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕೇಂದ್ರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಕೊಟ್ರೇಶ್ ಉಪ್ಪಾರ್ ಅವರು,ತಾಲ್ಲೂಕು ಘಟಕ ಅಧ್ಯಕ್ಷರಾದ ಕೃಷ್ಣಗೌಡ ಮಣಿಪುರ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರು ಎಂ ಶಿವಣ್ಣ, ಎಚ್ ಎಸ್ ಬಸವರಾಜ್, ತಾಲೂಕ್ ಪಂಚಾಯತ್ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ಕೆಂಚ0ಬಾ ದೇವಳ ಸಮಿತಿ ಅಧ್ಯಕ್ಷರು ಎಚ್ ಡಿ ಗೋಪಾಲ, ಎಚ್ ವೇದಾವತಿ, ಕೆ ಟಿ ಶೋಭಾ, ಎಚ್ ದಾಕ್ಷಯಿನಿ,ವಿ ರವಿತ, ಎಚ್ ಜೆ ಪೃಥ್ವಿರಾಜ್, ಎಂ ಬಿ ಅಮೃತೇಶ್,ಮೊದಲಾದವರು ಉಪಸ್ಥಿತರಿದ್ದರು.
ಹೊಸಕೋಟೆ ಎಸ್ ಕೆ ಎನ್ ಪ್ರೌಢಶಾಲಾ ವಿದ್ಯಾರ್ಥಿಗಳು, ರಾಣಿ ಚರಾಶ್ರೀ, ಶ್ವೇತ ಮೋಹನ್ ತಂಡದಿಂದ ವಿವಿಧ ಮನರಂಜನ ಕಾರ್ಯಕ್ರಮ ನೆರವೇರಿತು.


ವಿವಿಧ ಸಾಹಿತ್ಯ ಗೋಷ್ಠಿಗಳು
ಸಮಾರೋಪ ಸಮಾರಂಭ ಶೈಲಜಾ ಹಾಸನ್ ಅವರ ಘನ ಅಧ್ಯಕ್ಷತೆಯೊಂದಿಗೆ, ಸುಶೀಲ ಸೋಮಶೇಖರ್ ಅವರ ಉಪಸ್ಥಿತಿಯೊಂದಿಗೆ ವಿವಿಧ ಸಾಹಿತ್ಯ ಗೋಷ್ಠಿಗಳಿಗೆ ಸಾಕ್ಷಿಯಾಯಿತು.
ಎಚ್ ಡಿ ಸೋಮೇಶ್ ಅವರು “ಜಾನಪದ ಮತ್ತು ರಂಗಭೂಮಿಗೆ ಆಲೂರ್ ತಾಲ್ಲೂಕಿನ ಕೊಡುಗೆ” ವಿಷಯದ ಬಗ್ಗೆ, ಎಂ ಚಂದ್ರಕಲಾ ಅವರು “ಸಾಹಿತ್ಯ ಕ್ಷೇತ್ರಕ್ಕೆ ಆಲೂರ್ ತಾಲ್ಲೂಕಿನ ಕೊಡುಗೆ”, ಧರ್ಮ ಕೆರಲೂರು ಅವರು “ಆಲೂರು ತಾಲ್ಲೂಕಿನ ಐಹಿತ್ಯಗಳು ” ಎಂಬ ವಿಚಾರಗಳ ಕುರಿತು ಸುದೀರ್ಘವಾದ ಉಪನ್ಯಾಸಗಳನ್ನು ನೀಡುವುದರ ಮೂಲಕ ಆಲೂರಿನ ಬಗೆಗಿನ ವಿಶೇಷ ಮಾಹಿತಿಗಳನ್ನು ಮಂಡನೆ ಮಾಡಿದರು.
ಅನೇಕ ಸಾಧಕ ಗಣ್ಯರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನೆರವೇರಿತು, ಮುಖ್ಯವಾಗಿ ಬಿ ಎಂ ಭಾರತಿ ಹಾದಿಗೆ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ, ಜಯಣ್ಣ ಹೈದುರ್ ಅವರಿಗೆ ರೈತ ಸಾಧನೆಗಾಗಿ, ಹಿರಿಯ ಸಾಹಿತಿಗಳಾದ ಎಚ್ ದೇವರಾಜೆಗೌಡ ಅವರ ಬಹುಮುಖ ಸಾಧನೆಗಾಗಿ ಗೌರವಿಸಲಾಯಿತು.
ಗೋಷ್ಠಿಯ ಅಧ್ಯಕ್ಷರಾದ ಶೈಲಜಾ ಹಾಸನ ಅವರು ಇಂತಹ ಸಾಹಿತ್ಯಗೋಷ್ಠಿಗಳು ಮತ್ತಷ್ಟು ಬರಹಗಾರರಿಗೆ ಬಲತುಂಬುವ ಕಾರ್ಯಕ್ರಮವಾಗಿದೆ, ಹಾಗೂ ಯಾವುದೇ ಒಬ್ಬ ಬರಹಗಾರನು ಕೂಡ ಕಾವ್ಯಗಳ ರಚನೆಯನ್ನು ಮಾಡುವಾಗ ತಪ್ಪಿದರೂ ಸಮಸ್ಯೆಯಾಗದು, ಆದರೆ ಯಾವುದೇ ಕಾರಣಕ್ಕೂ ಮತ್ತೊಬ್ಬರ ಬರಹವನ್ನು ತಮ್ಮ ಬರಹವೆಂಬ0ತೆ ಬಿಂಬಿಸುತ್ತ ಕೃತಿ ಚೌರ್ಯ,ಬರಹಗಳ ನಕಲು ಮಾಡುವುದು ನಮಗೆ ನಾವೇ ಮಾಡಿಕೊಳ್ಳುವ ಮೋಸವಾಗುತ್ತದೆ, ಆದುದರಿಂದ ನಮ್ಮ ಬರಹಗಳಲ್ಲಿ ಸ್ವಂತಿಕೆ ಇರಲಿ ಎಂದು ಕರೆಕೊಟ್ಟರು.
ಸುಶೀಲ ಸೋಮಶೇಖರ್ ಅವರು ಮಾತನಾಡುತ್ತಾ ಸಾಹಿತ್ಯ ವೇದಿಕೆಗಳು ಕೇವಲ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು, ಬದಲಿಗೆ ಅದೂ ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಹಾಗೂ ನವ ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಕೈಗೊಳ್ಳುವಂತಿರಬೇಕು, ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಯಶಸ್ವೀ ಕಾರ್ಯಕ್ರಮಗಳನ್ನೂ ಬಹು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ, ಇದು ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಹಾಗೂ ಕಾವ್ಯವಾಚನದಲ್ಲಿ ಜಯಶಂಕರ್ ಬೆಳಗು0ಬ,ಕೆಟಿ ಜಯಶ್ರೀ, ವಾಣಿ ಮಹೇಶ್, ಪ್ರಶಾಂತ್, ರೇಖಾ ಪ್ರಕಾಶ್, ಚಂದ್ರು ಗೌಡ, ಯಮುನಾವತಿ, ಚಲುವೆಗೌಡ, ವೇದಶ್ರೀ, ಗಿರಿಜಾ ನಿರ್ವಾಣಿ, ರಾಣಿ ಚರಾಶ್ರೀ, ರೇಷ್ಮಾ ಶೆಟ್ಟಿ ಗೊರೂರು, ಅನಿಲ್ ಕುಮಾರ್, ಎಚ್ ಏನ್ ಭಾರತಿ,ಎಸ್ ಲಲಿತ, ರುದ್ರೇಶ್ ಬೇಲೂರ್, ಮಲ್ಲೇಶ್ ಜೀ ಹಾಸನ್, ಸಾವಿತ್ರಿ ಗೌಡ, ನೀಲವತಿ ಬಿ ಎನ್,ಉಮಾ ನಾಗರಾಜ್, ಪರಮೇಶ್ವರ್, ಅಶ್ವಿನಿ ಪಿ, ನವ್ಯ ಯಶವಂತ, ಪದ್ಮಾವತಿ ವೆಂಕಟೇಶ್, ಸರೋಜ ಟಿ, ಹರೀಶ್ ಕೊಳಗುಂದ, ಸಂದ್ಯಾ ಚನ್ನೇನಹಳ್ಳಿ ಪಾರ್ವತಿ, ನಿರಂಜನ್ ಮೊದಲಾದವರು ಜೊತೆಯಾದರು.
ಕಾರ್ಯಕ್ರಮದಲ್ಲಿ ಕೃಷ್ಣಗೌಡರವರು ಸ್ವಾಗತಿಸಿ, ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಸಿ, ಕೊಟ್ರೇಶ್ ಉಪ್ಪಾರ್ ಸರ್ವರನ್ನು ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page