ಗೊರೂರು ಶ್ರೀ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜನ್ಮ ದಿನಾಚರಣೆ

ಗೊರೂರು : ವೀರ ಸನ್ಯಾಸಿ ವಿವೇಕಾನಂದ ಅವರದು ಸ್ಪೂರ್ತಿದಾಯಕ ಆದರ್ಶ ವ್ಯಕ್ತಿತ್ವ ಹೀಗಾಗಿ ಪ್ರತಿಯೊಬ್ಬರಿಗೂ ಪ್ರೇರಣದಾಯಕರಾಗಿದ್ದಾರೆ. ಅವರ ಸಂದೇಶಗಳು ಇವತ್ತಿಗೂ ಸಮಾಜಕ್ಕೆ ಪ್ರಸ್ತುತವಾಗಿದೆ.
ಸ್ವಾಮಿ ವಿವೇಕಾನಂದರು ಆಡು ಮುಟ್ಟದ ಸೊಪ್ಪಿಲ್ಲ ಸಾಧನೆಗೈಯದ ಕ್ಷೇತ್ರವಿಲ್ಲ ಎಂಬಂತೆ ದುಡಿದವರು, ಅವರಿಂದ ಸಮಾಜಕ್ಕೆ ಹಲವು ಸಹಕಾರಗಳಾಗಿವೆ. ಅಂತಹ ವ್ಯಕ್ತಿ ಬಹುಬೇಗಾ ಅಗಲಿರುವುದು ದುರಂತವೇ ಸರಿ. ಬಹು ಸಂಸ್ಕೃತಿಯ ರಾಷ್ಟ್ರವಾದ ಭಾರತ ವಿವಿಧತೆಯಲ್ಲಿ ಏಕತೆಯುಳ್ಳ ದೇಶವಾಗಿದೆ. ಈ ನಮ್ಮ ದೇಶ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದಷ್ಟೇ ಮುಖ್ಯ, ಇಂತಹ ಬದುಕನ್ನು ಬದುಕಿದಂತ ವಿವೇಕಾನಂದರಂತೆ ನಾವೆಲ್ಲರೂ ಕೂಡ ಆದರ್ಶತೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ ಎಂದು ಗೊರೂರು ಶ್ರೀ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಆಚರಿಸುತ್ತ ಸಂಸ್ಥೆಯ ಮುಖ್ಯೋಪಾಧ್ಯಾಯನಿವರಾದ ಶಭಾನ ಗೊರೂರು ಅವರು ಅಭಿಪ್ರಾಯ ಮಂಡಿಸಿದರು.
ಸಂಸ್ಥೆಯ ಶಿಕ್ಷಕಿಯವರಾದ ಪೂಜಾರವರು ಮಾತನಾಡುತ್ತಾ ವಿವೇಕಾನಂದ ಎಂಬ ಮೇರು ಶಿಖರದೆತ್ತರದ ಸಾಧಕರ ಸಾಧನೆಯ ಕೊಂಚವನ್ನಾದರೂ ನಾವು ಕೂಡ ಅಳವಡಿಸಿಕೊಳ್ಳುವುದರ ಮುಖೆನ ಸಮಾಜಕ್ಕೆ ಸ್ವಲ್ಪಮಟ್ಟಿನ ಕೊಡುಗೆಗಳನ್ನಾದರೂ ನೀಡೋಣ ಎಂದು ಕರೆಕೊಟ್ಟರು.
ಹಾಗೂ ಸಂಸ್ಥೆ ಶಿಕ್ಷಕರಾದ ನವೀನ್ ರಾಜ್ ಗೊರೂರು ಅವರು ಮಾತನಾಡುತ್ತಾ ವಿವೇಕಾನಂದರವರು ಮೇಧಾವಿ, ತತ್ವಜ್ಞಾನಿ,ಅಪಾರಜ್ಞಾನ ಹೊತ್ತ ಜ್ಞಾನಗುಣ ಸಂಪನ್ನ ಇಡೀ ವಿಶ್ವವೇ ಕೊಂಡಾಡುವ ವ್ಯಕ್ತಿತ್ವದೊಂದಿಗೆ ಚರಿತ್ರೆ ನಿರ್ಮಿಸಿದ ಸಾಧಕೋತ್ತವರು ಎಂದು ನುಡಿದರು.
ಸಂಸ್ಥೆಯ ಐದನೇ ತರಗತಿ ವಿದ್ಯಾರ್ಥಿ ಶಿಖರ್ ಸದಾಶಿವ ಶೆಟ್ಟಿ ಗೊರೂರು ಅವರು ವಿವೇಕಾನಂದರ ವೇಷಧಾರಿಯಾಗಿ ಶಿಕ್ಷಕ ವೃಂದದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಟ್ಟರು. ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಿಶ್ಚಲ್,ಪ್ರತಿಕ್ಷ, ಆರಾಧ್ಯ,ಸಿಂಚನ ಅನುಷ್ಕಾ ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಊರಿನ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಚಿತ್ರಪಟಗಳನ್ನು ಹಿಡಿದು ಪುರಮೆರವಣಿಗೆ ನಡೆಸುತ್ತ ಘೋಷಣೆಗಳನ್ನು ಕೂಗುತ್ತಾ ವಿವೇಕಾನಂದರಿಗೆ ಜೈಕಾರ ಹಾಕಿದರು,ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶಿಕ್ಷಕಿಯವರಾದ ಸಮೀನಾ ಅಂಜು ಸ್ವಾಗತಿಸಿದರು, ತಾಸಿನ ಬಾನು ನಿರೂಪಿಸಿದರು, ಮಂಜುಳಾ ಗೊರೂರು ಜುಬೇದಾ ಅರಕಲಗೂಡು,ಶಾಂಭವಿ ಗೊರೂರು ಉಪಸ್ಥಿತರಿದ್ದರು, ಸಬಿಹಾ ಅವರು ಸರ್ವರನ್ನು ವಂದಿಸಿದರು, ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.



















