28 C
Udupi
Monday, May 4, 2026
spot_img
spot_img
HomeBlogವೀ ಒನ್ ಅಕ್ವ ಸೆಂಟರ್ ಕಾರ್ಕಳ ಇವರ ನೇತೃತ್ವದಲ್ಲಿ ಉಭಯ ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ವೀ ಒನ್ ಅಕ್ವ ಸೆಂಟರ್ ಕಾರ್ಕಳ ಇವರ ನೇತೃತ್ವದಲ್ಲಿ ಉಭಯ ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಕಾರ್ಕಳ : ಕಾರ್ಕಳದ ತಾಲೂಕು ಕ್ರೀಡಾಂಗಣದ ಬಳಿ ಇರುವ ಈಜುಕೊಳದಲ್ಲಿ ಅಕ್ವಾ ಸೆಂಟರ್ ಕಾರ್ಕಳ ಇವರ ವತಿಯಿಂದ ನಡೆದ ಅಕ್ವಾ ಅಮಿಗೋಸ್ ಸ್ವಿಮ್ಮಿಂಗ್ ಫೆಸ್ಟ್ -2025 ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳದ ಶಾಸಕರಾಗಿರುವ ವಿ. ಸುನಿಲ್ ಕುಮಾರ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಕಾರ್ಕಳದ ಮಣ್ಣಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಮಕ್ಕಳನ್ನು ಕರೆಸಿಕೊಂಡ ಸಂಸ್ಥೆಯ ಕಾರ್ಯವನ್ನು ಶ್ಲಾಘನಯಿಸಿದರು. ವೇದಿಕೆಯಲ್ಲಿ ಅಕ್ವಾ ಸೆಂಟರ್ ಕಾರ್ಕಳ ದಿಂದ ತರಬೇತು ಪಡೆದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಈಜು ಕ್ರೀಡಾಪಟು ವಿದ್ಯಾ ಪೈಯವರು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಪೋಷಕರ ಸಹಕಾರ ಇದ್ದಲ್ಲಿ ಉನ್ನತ ಮಟ್ಟ ಏರಲು ಸಾಧ್ಯವೆಂದು ಶುಭನುಡಿದರು.

38 ವರ್ಷಗಳಿಂದ ರಾಮಸಮುದ್ರದಲ್ಲಿ ಉಚಿತವಾಗಿ ಈಜುವನ್ನು ಹೇಳಿಕೊಡುತ್ತಿರುವಂತಹ ವಿಠ್ಠಲ್ ಅವರು ಮತ್ತು ಸರಕಾರಿ ಶಾಲಾ ಶಿಕ್ಷಕಿಯಾಗಿದ್ದುಕೊಂಡು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ವಿಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀ ಒನ್ ಅಕ್ವಾ ಸೆಂಟರ್ ಡೈರೆಕ್ಟರ್ ಆಗಿರುವ ರೂಪ ಮತ್ತು ನವೀನ್ ಹಾಗೂ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿ, ಮತ್ತು ಪುರುಷರು, ಮಹಿಳೆಯರು ವಿವಿಧ ವಿನ್ಯಾಸ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಪ್ರಮಾಣ ಪತ್ರ ಮತ್ತು ಪದಕಗಳನ್ನು ಪಡೆದರು. ಅಮೋಘವಾದಂತಹ ಒಂದು ಸ್ಪರ್ಧೆಯನ್ನು ಏರ್ಪಡಿಸಿದಂತಹ ಕೀರ್ತಿ “ವೀ ಒನ್ ಅಕ್ವಾ ಕಾರ್ಕಳ ಸೆಂಟರ್” ಪೋಷಕರಿಗೆ ಸಲ್ಲುತ್ತದೆ ಕಾರ್ಯಕ್ರಮದ ಪ್ರಾರ್ಥನೆ ಕು.ಶಾರ್ವರಿ, ನಿರೂಪಣೆ ರಮಿತಾ ಶೈಲೇಂದ್ರ ಅವರು ನೆರವೇರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page