
ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ಮಾಡಿದ್ದು ಇದರಿಂದ ಹಿಂದೂ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.
ಗಂಗೊಳ್ಳಿಯಲ್ಲಿ ಕಾಂಗ್ರೆಸ್-ಎಸ್‌ಡಿಪಿಐ ಅಧಿಕಾರ ಹಂಚಿಕೆ ವೇಳೆ ಘಟನೆ ನಡೆದಿದ್ದು ಎಸ್‌ಡಿಪಿಐ ಮುಖಂಡರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ದುವಾ ಮಾಡಿಸಿದ್ದಾರೆ.
ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬವರಿಗೆ ಅಧ್ಯಕ್ಷ ಸ್ಥಾನ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್‌ಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ವೇಳೆ ಮೌಲ್ವಿ ಕರೆಸಿ ಪ್ರಾರ್ಥನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಗುರುವಾರ ಸಂಜೆ ಉಪಾಧ್ಯಕ್ಷ ತಬ್ರೇಸ್ ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಮಾಡಿದ ಕುರಿತು ವಿವಾದ ಎದ್ದಿದ್ದು ಇದರ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಸದಸ್ಯರಿಂದ ಗಂಗೊಳ್ಳಿ ಪಂಚಾಯತ್‌ನಲ್ಲಿ ಗಣಪತಿ ಹೋಮ ನಡೆಸಲಾಗಿದೆ.



