23.6 C
Udupi
Wednesday, February 18, 2026
spot_img
spot_img
HomeBlogಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು

ಕಮಲಾಕ್ಷ ಕಾಮತ್ ಇವರ ಅಧ್ಯಕ್ಷತೆಯಲ್ಲಿ ಪ್ರತಿಭಾ ಪುರಸ್ಕಾರ, ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರಿಗೆ ಸನ್ಮಾನ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಡಿಸೆಂಬರ್ 30 ಸೋಮವಾರದಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಾಲಾ ಹಿತೈಷಿ ಕಮಲಾಕ್ಷ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳಾದ ವಿಖ್ಯಾತ ಹಾಗೂ ಅತಿಥಿಗಳಾಗಿ ಶ್ರೀಯುತ ಕುಮಾರಯ್ಯ ಹೆಗಡೆ, ಮುಖ್ಯ ಶಿಕ್ಷಕರುಗಳಾದ ಸತೀಶ್ ಶೆಟ್ಟಿ, ದೇವದಾಸ್ ಹೆಗ್ಡೆ, ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾದ ಬಾಲ ಕೃಷ್ಣ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅವರೆಲ್ಲರನ್ನು ಶಿಕ್ಷಕರಾದ ಜಗದೀಶ್ ಹೆಗಡೆಯವರು ಸ್ವಾಗತಿಸಿ ಗೌರವಿಸಿದರು. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಹ ಶಿಕ್ಷಕಿ ವೀಣಾ ರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರನ್ನು ಅತಿಥಿಗಳ ಪರವಾಗಿ ಸನ್ಮಾನಿಸಲಾಯಿತು. ಅದೇ ರೀತಿ ಮೂರನೇ ತರಗತಿ ವಿದ್ಯಾರ್ಥಿನಿ ಭೂಮಿಕಾಳ ಕಣ್ಣಿನ ಚಿಕಿತ್ಸೆಗಾಗಿ ಶಿಕ್ಷಕರ ವತಿಯಿಂದ ಸಂಗ್ರಹಿಸಿದ ಸಹಾಯಧನವನ್ನು ಹೆತ್ತವರಿಗೆ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಹ ಶಿಕ್ಷಕರಾದ ಸುದರ್ಶನ್ ರವರು ವಾದ ನೀಡಿ ಸಹ ಶಿಕ್ಷಕ ಉಮೇಶ್ ರವರು ಕಾರ್ಯಕ್ರಮ ಸಂಯೋಜನೆಗೊಳಿಸಿದರು ನಂತರ ವಿದ್ಯಾರ್ಥಿಗಳಿಗೆ ಮನೋರಂಜನ ಕಾರ್ಯಕ್ರಮ ನೆರವೇರಿತು . ಕುಮಾರಯ್ಯನವರು ವಿದ್ಯಾರ್ಥಿಗಳಿಗೆ ಕಿತ್ತಳೆಯನ್ನು ವಿತರಿಸಿದರು. ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page