21.6 C
Udupi
Monday, February 16, 2026
spot_img
spot_img
HomeBlogಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, 22ನೇ ವಾರ್ಷಿಕೋತ್ಸವದ ಸಂಭ್ರಮ

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, 22ನೇ ವಾರ್ಷಿಕೋತ್ಸವದ ಸಂಭ್ರಮ

spot_imgspot_img

ಬಾಲ್ಯ ಮಗುವಿನ ವ್ಯಕ್ತಿತ್ವ ರೂಪಿಸುವ ಮಹತ್ತರ ಕಾಲಘಟ್ಟ: ಸಾವಿತ್ರಿ ಮನೋಹರ್


ಕಾರ್ಕಳ:ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 22ನೇ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾದ ಶ್ರೀಮತಿ ಸಾವಿತ್ರಿ ಮನೋಹರ್ ಅವರು “ಬಾಲ್ಯ ಮಗುವಿನ ವ್ಯಕ್ತಿತ್ವ ರೂಪಿಸುವ ಮಹತ್ತರ ಕಾಲಘಟ್ಟ” ಎಂದು ಹೇಳಿದರು. ಶ್ರೀಮತಿ ಸಾವಿತ್ರಿ ಮನೋಹರ್ ರವರು ನ್ಯಾಷನಲ್ ಟ್ರೈನರ್ ಆಫ್ ಭಾರತ್ ಸ್ಕೌಟ್ ಆಡ್ ಗೈಡ್ಸ್ . ಶ್ರೀಮತಿ ಸಾವಿತ್ರಿ ಮನೋಹರ್ ರವರು ಮುಂದುವರಿಸುತ್ತಾ
“ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಬಹಳ ಮುಖ್ಯವಾದುದು ಜೊತೆಗೆ ಪುಸ್ತಕಗಳ ಪಾತ್ರವೂ ಅಷ್ಟೇ ಪ್ರಮುಖವಾಗಿದೆ “ಎಂದರು.

ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾದ ಡಾ! ಟಿ .ಎಂ. ಎಂ .ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿನ ಆರಿವಳಿಕೆ ಸಲಹೆಗಾರ ಮತ್ತು ನೋವು ನಿರ್ವಹಣೆ ಆರೈಕೆ ತಜ್ಞರಾದ ಡಾ. ಸುದರ್ಶನ್ ಎಸ್ ನಾಯ್ಕ್ ಇವರು ಮಾತನಾಡಿ , “ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಧೈರ್ಯ ಮತ್ತು ಆತ್ಮಸ್ಥೈರ್ಯ ವನ್ನು ಬೆಳೆಸುವಲ್ಲಿ ಪ್ರೋತ್ಸಾಹವನ್ನು ನೀಡುವುದು ಅತ್ಯಗತ್ಯ” ಎಂದರು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಡಾ. ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿ ಶ್ರೀಯುತ ಎಂ. ದಿನೇಶ್ ಕಾಮತ್, ಕಾರ್ಯದರ್ಶಿ ಶ್ರೀಯುತ ಗೋಕುಲದಾಸ್ ವಿನಾಯಕ ಜಿ .ಕುಡ್ವ, ಶಾಲಾ ಶೈಕ್ಷಣಿಕ ನಿರ್ದೇಶಕರಾದ ಶ್ರೀಯುತ ಬೋಳ ಅಜಿತ್ ಕಾಮತ್ , ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ .ಆರ್. ಕಾಮತ್, ಉಪ ಪ್ರಾಂಶುಪಾಲರಾದ ಸುಜಾತ .ಕೆ, ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ಶ್ರೀಶಾ ಅಧಿಕಾರಿ, ಶ್ರೀಮತಿ ಅಂಬಿಕಾ, ಶ್ರೀಮತಿ ಅನಸೂಯ, ಎಲ್ಲಾ ಶಿಕ್ಷಕ -ಶಿಕ್ಷಕೇತರವೃಂದ, ಶಾಲಾಪೋಷಕ- ಶಿಕ್ಷಕ ಸಂಘದ ಸದಸ್ಯರು,ಪೋಷಕರು ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅಧಿಕ ಅಂಕಗಳನ್ನು ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಾಚೀ ಆರ್ . ಜೈನ್ ನಿರೂಪಿಸಿ, ಕುಮಾರಿ ಬೋಳ ಅಕ್ಷರ ಕಾಮತ್ ಸ್ವಾಗತಿಸಿ, ಕುಮಾರಿ ಆರ್ .ಶ್ರೀಯಾ ಪ್ರಭು ವಂದಿಸಿದರು.ಮುಂದೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೂಜ್ಯ ಗುರೂಜಿಯವರ “ಭಾರತ್ ಭ್ರಮಣ್ ” ಎಂಬ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ವೈಭವವನ್ನು ಪ್ರದರ್ಶಿಸಿದರು.ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಪೋಷಕರು ವೈವಿಧ್ಯಮಯ ನೃತ್ಯ ಪ್ರದರ್ಶನವನ್ನು ನೀಡಿದರು.ಈ ಕಾರ್ಯಕ್ರಮವು ಅಪಾರ ಜನ ಮೆಚ್ಚುಗೆ ಗಳಿಸಿತು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page