ಕೆಎಂಸಿ ಮಣಿಪಾಲ್ ವೈದ್ಯರಿಂದ ಮಂಗನ ಕಾಯಿಲೆ ಬಗ್ಗೆ ಮಾಹಿತಿ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇಲ್ಲಿಗೆ ಇಂದು ಕೆಎಂಸಿ ಮಣಿಪಾಲ್ ಇಲ್ಲಿನ ವೈದ್ಯರಾದ ಡಾ! ರೇವಂತೇಶ್ ಹಾಗೂ ವಿದ್ಯಾರ್ಥಿಗಳಾದ ಕಿರಣ್ಮಯಿ ಹಾಗೂ ಖುಷಿ ಆಗಮಿಸಿ ಮಂಗನ ಕಾಯಿಲೆ (KFDC) ಬಗ್ಗೆ ಮಾಹಿತಿ ನೀಡಿದರು. ಮಂಗನ ಉಣ್ಣೆಯಿಂದ ಈ ಕಾಯಿಲೆ ಹರಡುವುದರಿಂದ ಸತ್ತ ಮಂಗನಿಂದ ದೂರ ಇರುವಂತೆ ತಿಳಿಸಿದರು.
ಕಾಡಿಗೆ ಹೋದವರು ಅಥವಾ ಮಂಗಗಳ ಹತ್ತಿರ ಸಂಪರ್ಕವಿರುವವರು ಬಳಸಿದ ಬಟ್ಟೆಯನ್ನು ಬಿಸಿ ನೀರಿನಲ್ಲಿ ತೊಳೆದು, ಸಾಬೂನು ಬಳಸಿ ಕೈ ತೊಳೆಯುವುದು, ಸ್ನಾನ ಮಾಡುವುದು ಮುಂತಾದ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು. ಕಾಯಿಲೆಯ ಲಕ್ಷಣಗಳಾದ ಜ್ವರ, ತಲೆನೋವು, ವಾಂತಿ ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರು ಸ್ವಾಗತಿಸಿದರು. ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತೆಯರಾದ ಸ್ವಾತಿ, ಆಶಾ ಕಾರ್ಯಕರ್ತೆ ಶಶಿಕಲಾ ಉಪಸ್ಥಿತರಿದ್ದರು. ಕೊನೆಯಲ್ಲಿ ಜಗದೀಶ್ ಹೆಗ್ಡೆಯವರು ಎಲ್ಲರಿಗೂ ಧನ್ಯವಾದ ನೀಡಿದರು.



















