
ಕಾರ್ಕಳ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮಿಯ್ಶಾರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ,ಹಲವಾರು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳಲ್ಲಿ ನೇತೃತ್ವ ವಹಿಸಿದ ಅನುಭವ ಇರುವ ತಾರಾನಾಥ್ ಕೋಟ್ಯಾನ್ ಸೂರಾಲು ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಅನುಮೋದನೆಗೊಂಡ ನೂತನ ಸಮಿತಿಯ ಪ್ರಥಮ ಸಭೆಯು ನ.28 ರಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಕಾರ್ಕಳ ಕ್ಷೇತ್ರ ಶಿಕ್ಷಾಧಿಕಾರಿ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ದೇವಳದ ಸಭಾಂಗಣದಲ್ಲಿ ನಡೆಯಿತು, ಸಭೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ
ಹರಿದಾಸ್ ಭಟ್ ಮಿಯ್ಶಾರು ,
ಉಮೇಶ್ ಕುರ್ಕಲ್ ಪಲ್ಕೆ
ಶ್ರೀಮತಿ ಉಷಾ ಡಿ.ಬಂಗೇರ ಬಜಗೋಳಿ
ಶ್ರೀಮತಿ ಪ್ರಿಯಾ ರೈ ನಲ್ಲೂರು , ಮಾಧವ ಕಾಮತ್ ಮಿಯ್ಶಾರು
ರಮಾಕಾಂತ್ ಶೆಟ್ಟಿ ಕರ್ಮಾರ್ ಕಟ್ಟೆ
ಮಂಜುನಾಥ ನಾಯಕ್ ಕುಂಟಿಬೈಲು
ಸುಕೀರ್ತಿ ಶೆಟ್ಟಿ ಕೊಳಕೆರೆಬೆಟ್ಟು ಆಯ್ಕೆಗೊಂಡಿರುತ್ತಾರೆ.



















