
ಕಲಬುರಗಿ: ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು “ಬಿಜೆಪಿಗರು ಹೋರಾಟ ಮಾಡುತ್ತಿರುವುದು ಆಂದೋಲನಕ್ಕೋಸ್ಕರ ಅಲ್ಲ, ಬದಲಾಗಿ ಅವರು ಖುದ್ಕಾ ಬಚಾವೋ ವಿಜಯೇಂದ್ರ ಹಠವೋ ಆಂದೋಲನ ಮಾಡುತ್ತಿದ್ದಾರೆ” ಎಂದು ಆಕ್ರೋಷ ಹೊರಹಾಕಿದ್ದಾರೆ.
ಅವರು ರೈತರ ಪರವಾಗಿ ಹೋರಾಟ ನಡೆಸುತ್ತಿಲ್ಲ. ಕಮಲ ಚಿಹ್ನೆ ಇದ್ದಲ್ಲಿ ಅವರ ನಾಯಕರ ಫೋಟೋ ಹಾಕಬೇಕಲ್ಲವೇ? ಯಾಕೆ ಹಾಕುತ್ತಿಲ್ಲ? ಬ್ಯಾನರ್ ನಲ್ಲಿ ಯಾವ ನಾಯಕರ ಫೋಟೋ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಕುರಿತಾಗಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.



















