28.1 C
Udupi
Thursday, April 30, 2026
spot_img
spot_img
HomeBlogಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಬರದಲ್ಲಿ ವಿಶೇಷ ಚೇತನರ ಅನುದಾನದಲ್ಲಿ 80% ರಷ್ಟು ಕಡಿತ ಆರೋಪ!

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಬರದಲ್ಲಿ ವಿಶೇಷ ಚೇತನರ ಅನುದಾನದಲ್ಲಿ 80% ರಷ್ಟು ಕಡಿತ ಆರೋಪ!

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಬರದಲ್ಲಿ ರಾಜ್ಯ ಸರ್ಕಾರವು ಉಳಿದ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ ಅನ್ನೋ ಆರೋಪಗಳು ಪದೇ ಪದೇ ಕೇಳಿ ಬರುತ್ತಿದ್ದು ಇದೀಗ ಅಂಗವಿಕಲರ ಅನುದಾನಕ್ಕೂ ಕಳೆದ ವರ್ಷಕ್ಕಿಂತ 80% ರಷ್ಟು ಅನುದಾನ ಕಡಿತ ಮಾಡಿದೆ ಎಂದು ವಿಕಲಚೇತರ ಫೆಡರೇಷನ್‌ ಆರೋಪಿಸಿದೆ.ನಮ್ಮ ಯೋಜನೆಗಳಿಗೆ ನೀಡಬೇಕಾದ ಅನುದಾನವನ್ನ ನೀಡಿ ಎಂದು ಮನವಿ ಮಾಡಿದ್ದು ಸರ್ಕಾರ ನಮ್ಮ ಮನವಿಯನ್ನ ಪೂರೈಸದೆ ಇದ್ದರೆ ಇದೇ ಡಿಸೆಂಬರ್ 2ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ರಾಷ್ಟ್ರೀಯ ವಿಕಲಚೇತನರ ಫೆಡರೇಷನ್ ಕರ್ನಾಟಕ ಶಾಖೆಯ ವ್ಯವಸ್ಥಾಪಕ ಹೇಮಂತ್‌ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ನೀಡುವ ಬರದಲ್ಲಿ ಅಂಗವಿಕಲರಿಗೆ ಅನ್ಯಾಯ ಮಾಡ್ತಿದೆ. ರಾಜ್ಯದಲ್ಲಿರೋ ಅಂಗವಿಕಲರು ಸೇವಾಸಿಂಧು ಮೂಲಕ ಅನುದಾನಕ್ಕೆ ಅರ್ಜಿ ಹಾಕಿದ್ರೂ ಅನುಕೂಲವಾಗ್ತಿಲ್ಲ, ವ್ಹೀಲ್‌ ಚೇರ್ ಆಗಿರಬಹುದು, ಲ್ಯಾಪ್‌ಟ್ಯಾಪ್ ಆಗಿರಬಹುದು ಹೀಗೆ ಎಲ್ಲ ಸ್ಕೀಮ್‌ಗೂ ತೊಡಕಾಗಿದೆ. ಈ ಬಗ್ಗೆ ಸಿಎಂ, ಡಿಸಿಎಂಗೂ ಮನವಿ ಮಾಡಿದ್ದೇವೆ. ಇದೇ ಡಿಸೆಂಬರ್ 3 ಅಂಗವಿಕಲರ ದಿನಾಚರಣೆಯಿದ್ದು ಸರ್ಕಾರ ಡಿಸೆಂಬರ್ 2ರೊಳಗೆ ಅನುದಾನ ನೀಡದೇ ಇದ್ದರೆ ಅಂದಿನಿಂದಲೇ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page