ಅಧ್ಯಕ್ಷರಾಗಿ ಶ್ವೇತಾ ಸಂತೋಷ್, ಕಾರ್ಯದರ್ಶಿಯಾಗಿ ಸುಷ್ಮಿತಾ ವಿಜ್ಞೇಶ್ ಪ್ರಸಾದ್

ಕಾರ್ಕಳ: ಜೆಸಿಐ ಕಾರ್ಕಳದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನವೆಂಬರ್ 27ರಂದು ನಡೆದಿದ್ದು, ಅಧ್ಯಕ್ಷರಾಗಿ ಶ್ವೇತಾ ಸಂತೋಷ್, ಕಾರ್ಯದರ್ಶಿಯಾಗಿ ಸುಷ್ಮಿತಾ ವಿಘ್ನೇಶ್ ಪ್ರಸಾದ್ , ಹಾಗೂ ಕೋಶಾಧಿಕಾರಿಯಾಗಿ ರೇವತಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜೆಸಿಐನ ಪೂರ್ವ ವಲಯ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ, ಪೂರ್ವ ವಲಯ ಅಧಿಕಾರಿ ಪದ್ಮಪ್ರಸಾದ್ ಜೈನ್, ಜೆಸಿಐ ನಿಕಟ ಪೂರ್ವ ಅಧ್ಯಕ್ಷರಾದ ವಿಘ್ನೇಶ್ ಪ್ರಸಾದ್ ಕಾರ್ಕಳ ಜೆಸಿಐ ಅಧ್ಯಕ್ಷರಾದ ಪ್ರಚೀತ್ ಕುಮಾರ್ ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ವೃಷಭರಾಜ್ ಕಡಂಬ, ಡಾ. ಮುರಳಿಧರ್ ಭಟ್, ಪೂರ್ವಾಧ್ಯಕ್ಷರಾದ ವೃಷಭ ರಾಜ್ ಕಡಂಬ, ಪ್ರದೀಪ್ ನಾಯಕ್, ದಿನೇಶ್ ಕೆ ಮತ್ತಿತರ ಜೇಸಿ ಸದಸ್ಯರು ಉಪಸ್ಥಿತರಿದ್ದರು.



















