
ಕಾರ್ಕಳ: ದಿನಾಂಕ 7, 8, 14 ಮತ್ತು 15 ಡಿಸೆಂಬರ್ 2024 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಸೌಹಾರ್ದ ಫ್ರೆಂಡ್ಸ್ ಕಾರ್ಕಳ ವತಿಯಿಂದ ಫುಲ್ ಗ್ರೌಂಡ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಕಾರ್ಕಳ ತಾಲೂಕು ಮಟ್ಟದ 12 ಹಾಗೂ ಮಂಗಳೂರು ವಲಯದ 12 ಸ್ಥಳೀಯ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದು ಪ್ರಥಮ ಬಹುಮಾನ 1,10,000 ರೂ.ನಗದು ಮತ್ತು ಸೌಹಾರ್ದ ಟ್ರೋಪಿ ಹಾಗೂ ದ್ವಿತೀಯ ಬಹುಮಾನ 80,000 ರೂ. ನಗದು ಮತ್ತು ಸೌಹಾರ್ದ ಟ್ರೋಪಿ ದೊರೆಯಲಿದೆ.
ಕ್ರೀಡಾಪಟುಗಳು, ಮೆಸ್ಕಾಂ ಇಲಾಖೆಯ ಸಿಬ್ಬಂದಿ, ಆಂಬುಲೆನ್ಸ್ ಚಾಲಕರು ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈಶ್ವರ್ ಮಲ್ಪೆ ಅವರಿಗೆ ಸನ್ಮಾನ ಹಾಗೂ ಸಹಾಯಧನ ವಿತರಣೆ, ಡಾ. ಟಿಎಂಎ ಪೈ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ ಬಡ ರೋಗಿಗಳ ಚಿಕಿತ್ಸೆಗೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯಲಿದೆ.



















