
ಉಡುಪಿ: ಕಾಂತಾರ- 1 ಚಿತ್ರದ ನೃತ್ಯ ಕಲಾವಿದ ರಿಂದ ವಾಹನ, ಚಿತ್ರೀಕರಣ ಮುಗಿಸಿ ತೆರಳುವ ವೇಳೆ ಪಲ್ಟಿಯಾದ ಘಟನೆ ವರದಿಯಾಗಿದೆ.
ಕಾಂತರ ತಂಡವು ಚಿತ್ರೀಕರಣ ಮುಗಿಸಿ ಕೊಲ್ಲೂರು ಮಾರ್ಗದಲ್ಲಿ ತೆರಳುತ್ತಿದ್ದು ವಾಹನದಲ್ಲಿ 25 ಮಂದಿ ನೃತ್ಯ ಕಲಾವಿದರಿದ್ದು, ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರಾವಳಿಯ ವಿವಿಧ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಚಿತ್ರತಂಡವು ಮುದೂರಿನಲ್ಲಿ ಚಿತ್ರಕರಣ ಮುಗಿಸಿ, ಕೊಲ್ಲೂರಿನ ಕಡೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.



















