
ಆಧಾರ ಕಾರ್ಡಿನಲ್ಲಿರುವ ಲೋಪದೋಷಗಳನ್ನು ಉಚಿತವಾಗಿ ಸರಿಪಡಿಸಲು, ಆನ್ ಲೈನ್ ನಲ್ಲಿ ಆಧಾರ್ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಡಿಸೆಂಬರ್ 14ರವರೆಗೆ ಕಾಲಾವಕಾಶ ಇದೆ.
ಆಧಾರ ಕಾರ್ಡ್ ನಲ್ಲಿರುವ ಅಕ್ಷರ ದೋಷ, ವಿಳಾಸ ಬದಲಾವಣೆ, ಹೆಸರು ಜನ್ಮ ದಿನಾಂಕ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಯನ್ನು ಆನ್ಲೈನಲ್ಲಿ ಪರಿಷ್ಕರಿಸಲು ಸಾಧ್ಯವಿದೆ. ಡಿಸೆಂಬರ್ 14ರವರೆಗೆ ಯಾವುದೇ ಶುಲ್ಕವಿಲ್ಲದೇ ಆನ್ಲೈನ್ ನಲ್ಲಿ ಅಪ್ ಡೇಟ್ ಮಾಡಬಹುದು.
ಇನ್ನು 10 ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡದೇ ಇರುವವರು ಡೆಮೋಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬೇಕೆಂದು ಯುಐಡಿಎಐ ತಿಳಿಸಿದೆ.



















