
ಶ್ರೀ ರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಕ್ಷೇತ್ರ ನೆಲ್ಲಿ ನಿಟ್ಟೆ ಇದರ ಜನವರಿ 28 ರಿಂದ ಫೆಬ್ರವರಿ 05 ರವರೆಗೆ ನಡೆಯಲಿರುವ ವೈಭವದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯಿತು.

ಮೊಕ್ತೇಸರರಾದ ಸುನಿಲ್ ಕೆ ಆರ್, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷರಾದ ಮಹಾಬಲ ಸುವರ್ಣ, ಕಾರ್ಯದರ್ಶಿ ಸುಮಿತ್ ಕೌಡೂರು, ಅರ್ಚಕರಾದ ನಿತ್ಯಾನಂದ ಶಾಂತಿ ಮತ್ತು ಸಮಿತಿ ಪದಾಧಿಕಾರಿಗಳು ಉಪಸ್ಥಿತಿ ಇದ್ದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ರಚನೆ ಮತ್ತು ಕಾರ್ಯಯೋಜನೆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.





















