28.2 C
Udupi
Thursday, April 30, 2026
spot_img
spot_img
HomeBlogಗುಜರಿ ವಿಲೇವಾರಿ, 2364 ಕೋಟಿ ರೂ. ಗಳಿಕೆ ಮಾಡಿದ ಕೇಂದ್ರ ಸರ್ಕಾರ

ಗುಜರಿ ವಿಲೇವಾರಿ, 2364 ಕೋಟಿ ರೂ. ಗಳಿಕೆ ಮಾಡಿದ ಕೇಂದ್ರ ಸರ್ಕಾರ

ಇತ್ತೀಚೆಗೆ ಕೇಂದ್ರ ಸರ್ಕಾರವೂ ತನ್ನ ಕಚೇರಿಗಳ ಸ್ವಚ್ಛತಾ ಕಾರ್ಯ ನಡೆಸಿದ್ದು, ಈ ವೇಳೆ 2021ರಿಂದ 2024ರವರೆಗಿನ ಒಟ್ಟು ಮೂರುವರೆ ವರ್ಷಗಳ ಬೇಡವಾದ ಗುಜರಿ ಸಾಮಾನುಗಳನ್ನು ಮಾರಿ ಸುಮಾರು 2,364 ಕೋಟಿ ರೂಪಾಯಿ ಗಳಿಕೆ ಮಾಡಿದೆ.

2021ರಿಂದಲೂ ಬಳಕೆಯಲ್ಲಿ ಇಲ್ಲದ ಹಾಗೂ ಶಾಶ್ವತವಾಗಿ ಬೇಡವಾದ ವಸ್ತುಗಳನ್ನು ಮಾರಿ ಒಟ್ಟು 2,364 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಗಳಿಕೆ ಮಾಡಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಶೇಷ ಅಭಿಯಾನ 4.0, ಇದು ಭಾರತದ ಈ ರೀತಿಯ ಅತೀ ದೊಡ್ಡ ಅಭಿಯಾನವಾಗಿದ್ದು, ಬೇಡದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ದೇಶದ ಬೊಕ್ಕಸಕ್ಕೆ ಸುಮಾರು 2,364 ಕೋಟಿ ರೂಪಾಯಿ ಬಂದಿದೆ ಎಂದು ಬರೆದು ಹಂಚಿಕೊಂಡಿದ್ದಾರೆ.

ಈ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ದಕ್ಷ ನಿರ್ವಹಣೆ ಮತ್ತು ಪೂರ್ವಭಾವಿ ಕ್ರಮದ ಮೇಲೆ ಕೇಂದ್ರೀಕರಿಸುವ ಮೂಲಕ ಈ ಪ್ರಯತ್ನವು ಉತ್ತಮ ಫಲಿತಾಂಶ ನೀಡಿದೆ. ಸಾಮೂಹಿಕ ಪ್ರಯತ್ನಗಳು ಸುಸ್ಥಿರ ಫಲಿತಾಂಶಗಳಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ, ಸ್ವಚ್ಛತೆ ಹಾಗೂ ಆರ್ಥಿಕ ವಿವೇಕ ಎರಡನ್ನೂ ಉತ್ತೇಜಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂತಹ ಗುಜುರಿ ಅಭಿಯಾನವನ್ನು ಸರ್ಕಾರ ನಡೆಸುತ್ತಿರುವುದು ಇದೇ ಮೊದಲಲ್ಲ, 2021ರಿಂದ ಇದುವರಗೆ ಮಾಡಿದ ಈ ಕಾರ್ಯಾಚರಣೆಯಲ್ಲಿ ಒಟ್ಟು 2,364 ಕೋಟಿ ಗಳಿಕೆಯಾಗಿದೆ. 2024ರಲ್ಲಿ 5.97 ಲಕ್ಷ ಸೈಟುಗಳು ಈ ಅಭಿಯಾನದ ಭಾಗವಾಗಿವೆ. 2023ರಲ್ಲಿ 2.59 ಲಕ್ಷ ಸೈಟುಗಳಿದ್ದವು ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page