28.2 C
Udupi
Thursday, April 30, 2026
spot_img
spot_img
HomeBlogಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು

ಜ್ಞಾನ ವರ್ಷಿಣಿ ಹಾಗೂ ಜ್ಞಾನದರ್ಶಿನಿ ಪುಸ್ತಕ ಆಧಾರಿತ ಸ್ಪರ್ಧೆ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇಲ್ಲಿ ಜ್ಞಾನ ವರ್ಷಿಣಿ ಹಾಗೂ ಜ್ಞಾನದರ್ಶಿನಿ ಪುಸ್ತಕ ಆಧಾರಿತ ಸ್ಪರ್ಧಾ ಪೂರ್ವಭಾವಿಯಾಗಿ ಸಭಾ ಕಾರ್ಯಕ್ರಮವು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಭಾಸ್ಕರ್ .ಟಿ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಅತಿಥಿಗಳಾಗಿ ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕರಾದ ಶಶಿಕಾಂತ್ ಜೈನ್, ಯೋಗ ಶಿಕ್ಷಕರದ ನರೇಂದ್ರ ಕಾಮತ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬ, ದುರ್ಗಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ, ಉಪಸ್ಥಿತರಿದ್ದು ಇವರೆಲ್ಲರನ್ನು ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರು ಸ್ವಾಗತಿಸಿದರು. ಭಾಸ್ಕರ್. ಟಿ ಯವರು ಯೋಗ ಹಾಗೂ ನೈತಿಕ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ನರೇಂದ್ರ ಕಾಮತ್ ರವರು ಕಾರ್ಯಕ್ರಮ ಸಂಯೋಜಿಸ ಗೀತಾ ಭಂಡಾರಿ ಅವರು ಧನ್ಯವಾದ ನೀಡಿದರು. ನಂತರ ನಡೆದ ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರನ್ನು ಗುರುತಿಸಲಾಯಿತು. ಮಧ್ಯಾಹ್ನದ ಭೋಜನದ ನಂತರ ರೋಟರಿ ಮಾಜಿ ಜಿಲ್ಲಾ ಗವರ್ನರ್ ಭರತೇಶ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಅತಿಥಿಗಳಾದ ವೇದಿಕೆಯಲ್ಲಿ ಶಶಿಕಾಂತ್ ಜೈನ್, ನರೇಂದ್ರ ಕಾಮತ್, ಯೋಗ ಮತ್ತು ನೈತಿಕ ಶಿಕ್ಷಣದ ಜಿಲ್ಲಾ ಸಂಯೋಜಕರಾದ ಕೃಷ್ಣರವರು, ಸ್ಥಳೀಯ ಜ್ಞಾನಸುಧಾ ಕಾಲೇಜಿನ ಉಪ ಪ್ರಾಂಶುಪಾಲರಾದ ಉಷಾ ರಾವ್, ಹಾಗೂ ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಉಪಸ್ಥಿತರಿದ್ದರು. ಜಗದೀಶ್ ಹೆಗ್ಡೆಯವರು ಎಲ್ಲರನ್ನೂ ಸ್ವಾಗತಿಸಿದರು. ನಂತರ ವಿಜೇತ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಶ್ಲೋಕವನ್ನು ಪ್ರಸ್ತುತಪಡಿಸಲಾಯಿತು. ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಹ ಶಿಕ್ಷಕ ಉಮೇಶ್ ರವರು ನಡೆಸಿಕೊಟ್ಟರು. ನರೇಂದ್ರ ಕಾಮತ್ ರವರು ಕಾರ್ಯಕ್ರಮ ಸಂಯೋಜಿಸಿ ಕೃಷ್ಣಾರವರು ಧನ್ಯವಾದ ನೀಡಿದರು. ಇಲ್ಲಿನ ಶಿಕ್ಷಕ ಶಿಕ್ಷಕಿಯರ ಕಾರ್ಯದಕ್ಷತೆಯನ್ನು ಗುರುತಿಸಿ ಟ್ರಸ್ಟ್ ನ ನಿರ್ದೇಶಕರಾದ ಶಶಿಕಾಂತ್ ಜೈನ್ ರವರು ಎಲ್ಲರಿಗೂ ಡೈರಿ ಹಾಗೂ ಪೆನ್ನು ನೀಡಿ ಗೌರವಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page