
ಬೆಂಗಳೂರು: ವಕ್ಫ್ ವಿವಾದ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಹಾಗೂ ಉಪಚುನಾವಣೆ ಹೊತ್ತಿನಲ್ಲಿ ವಕ್ಫ್ ವಿವಾದದ ಕುರಿತು ಸ್ವಪಕ್ಷದಲ್ಲೇ ಅಸಮಾಧಾನ ಉಂಟಾದ ಕಾರಣ, ರಾಜ್ಯ ಸರಕಾರ ಇದೀಗ ರೈತರಿಗೆ ನೀಡಲಾಗಿದ್ದ ನೋಟಿಸ್ ವಾಪಸ್ ಪಡೆಯುವಂತೆ ಅಧಿಕೃತ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಮ್ಯುಟೇಷನ್ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ರೈತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಆದೇಶದ ಬಳಿಕವೂ ಯಾವುದೇ ಕ್ರಮ ಕೈಗೊಂಡಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಅಪಾರ ಕಾರ್ಯದರ್ಶಿ, ಡಾ. ಬಿ ಉದಯಕುಮಾರ್ ಶೆಟ್ಟಿ, ಆದೇಶದಲ್ಲಿ ತಿಳಿಸಿದ್ದಾರೆ.




















