
ಕಾರ್ಕಳದ ಕ್ರಿಕೆಟ್ ಇತಿಹಾಸದಲ್ಲೇ ಅತೀ ನಿರೀಕ್ಷಿತ ಅತ್ಯಂತ ಅದ್ಧೂರಿಯ ಅಂಡರ್ ಆರ್ಮ್ ಲೀಗ್ ಮಾದರಿಯ ಕ್ರಿಕೆಟ್ ಗೆ ಸಾಕ್ಷಿಯಾದ ಸಹಾರ ಲೀಗ್ ಇದರ 3ನೆ ಅವೃತ್ತಿ ಕಾರ್ಕಳ ಗಾಂಧಿ ಮೈದಾನ ದಲ್ಲಿ ಟೆನ್ನಿಸ್ ಬಾಲ್, ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ S P L (ಸಹಾರ ಪ್ರೀಮಿಯರ್ ಲೀಗ್ 2024/25 ) ಸೀಸನ್ 3 ಆಯೋಜಿಸಲಾಗಿದೆ.
ಒಟ್ಟು 16 ಆಹ್ವಾನಿತ ತಂಡಗಳು ಭಾಗವಹಿಸಲಿವೆ, ಲೀಗ್ ಮಾದರಿಯಲ್ಲಿ ಈ ಪಂದ್ಯ ಕೂಟ ಆಯೋಜಿಸಲಾಗಿದೆ. ಬೆದ್ರ ಮೀಡಿಯಾ ಮುಖಾಂತರ ಲೈವ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಸಹಾರ ಪ್ರೀಮಿಯರ್ ಲೀಗ್ 2024/25ದಿನಾಂಕ 07-01-2025 ರಿಂದ 12-01-2025ಸ್ಥಳ : ಗಾಂಧಿ ಮೈದಾನ್ , ಕಾರ್ಕಳ ಪ್ರವೇಶ ಶುಲ್ಕ – 10000ಪ್ರಥಮ : 66,666 – ಸಹಾರ ಟ್ರೋಫಿದ್ವಿತೀಯ : 33,333- ಸಹಾರ ಟ್ರೋಫಿಸರಣಿ ಶ್ರೇಷ್ಠ, ಪಂದೃ ಶ್ರೇಷ್ಠ ಹಾಗೂ ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಇನ್ನೂ ಹಲವಾರು ವೈಯುಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು .
ಪ್ರತಿ ತಂಡದಲ್ಲಿ ಕಾರ್ಕಳ ಹೆಬ್ರಿ ವಲಯದ 8 ಆಟಗಾರರು ಕಡ್ಡಾಯ 3 ಮಂಗಳೂರು ವಲಯದ ಆಟಗಾರರಿಗೆ ಅವಕಾಶ. ಭಾಗವಿಹಿಸುವ ತಂಡಗಳು ದಿನಾಂಕ 01 ಡಿಸೆಂಬರ್ ರ ಒಳಗೆ 5000 ಮುಂಚಿತವಾಗಿ ಪಾವತಿಸಿ ಹೆಸರು ನೊಂದಾಯಿಸಬೇಕು ಡಿಸೆಂಬರ್ 05 ಕ್ಕೆ ಲಾರ್ಡ್ಸ್ ಹಾಕಲಾಗುದು ಲಾರ್ಡ್ಸ್ ಹಾಕುವ ಸ್ಥಳದಲ್ಲಿ ಪ್ರತಿ ತಂಡದ ಓರ್ವ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು.15 ಆಟಗಾರರ ಭಾವಚಿತ್ರದೊಂದಿಗೆ ಪ್ಲೇಯರ್ ಫಾರಂ ಅನ್ನು ಡಿಸೆಂಬರ್ 5 ಲಾರ್ಡ್ಸ್ ಹಾಕುವಾಗ ವ್ಯವಸ್ಥಾಪಕರಿಗೆ ನೀಡಬೇಕು.ನಂತರ ಆಟಗಾರರನ್ನು ಬದಲಾಯಿಸುವಂತಿಲ್ಲ.ಪ್ಲೇಯರ್ ಫಾರಂ ಅನ್ನು ವ್ಯವಸ್ಥಾಪಕರು ಎಲ್ಲಾ ತಂಡ ಗಳಿಗೆ ನೀಡುತ್ತಾರೆ ಯಾವುದೇ ಚರ್ಚೆ ಬಂದಲ್ಲಿ ತಂಡದ ನಾಯಕನಿಗೆ ಮಾತ್ರ ಮಾತನಾಡಲು ಅವಕಾಶ.ಅಶಿಸ್ತು ತೋರಿದ ತಂಡವನ್ನು ಕೈ ಬಿಡಲಾಗುವುದು ಪಂದ್ಯವಳಿ ಯ ನೀತಿ ನಿಯಮ ವನ್ನು ಲಾರ್ಡ್ಸ್ ಹಾಕುವ ಸಂದರ್ಭ ಎಲ್ಲಾ ತಂಡದ ಕ್ಯಾಪ್ಟನ್ ಗೇ ವಿವರಿಸಲಾಗುದು ಎಂದು ತಿಳಿಸಿದ್ದಾರೆ.























































