
ಹೆಬ್ರಿ :ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಭವನ ಮೈಸೂರಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ಸಾಧಕರಿಗೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಬಹುಮುಖ ಪ್ರತಿಭೆ ಕಬ್ಬಿನಾಲೆಯ ರಚಿತಾ ಕುಲಾಲ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2024 ನೀಡಿ ಸನ್ಮಾನಿಸಲಾಯಿತು.
ಈಕೆ ಕಬ್ಬಿನಾಲೆ ಕಾಪೋಳಿ ರಾಘವೇಂದ್ರ ಕುಲಾಲ್ ಮತ್ತು ಸವಿತಾ ಕೆ. ದಂಪತಿಯ ಪುತ್ರಿಯಾಗಿರುತ್ತಾರೆ.






















































