ಅಂಧಕಾರಕ್ಕೊಂದು ಬೆಳಕು ಚೆಲ್ಲುವ ಪ್ರಯತ್ನಕ್ಕೆ, ಜೊತೆಯಾಗೋಣ ಬನ್ನಿ….

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ (DRUD/SOR/140/2023-2024)ಮತ್ತು ಬೈಲೂರು ಟೈಗರ್ಸ್ ವತಿಯಿಂದ ಸೇವಾ ಯೋಜನೆ
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂಜೂರಿನಲ್ಲಿ ವಾಸವಾಗಿರುವ ದಿನೇಶ್ ರವರ ಕುಟುಂಬ 12 ವರ್ಷದ ಹಿಂದೆ ನಿರ್ಮಿಸಿರುವ ಮನೆಗೆ ಒಂದೇ ಒಂದು ಬಾಗಿಲು ಅಥವಾ ಕಿಟಕಿ ಕೂಡ ಇಲ್ಲ ಈ ಮನೆಯಲ್ಲಿ 5 ಜನ ವಾಸವಾಗಿದ್ದಾರೆ, ದಿನೇಶ್ ಅವರ ತಾಯಿ ಹೆಂಡತಿ ಮತ್ತು ಇಬ್ಬರು ಮಕ್ಕಳು, ದಿನೇಶ್ ಅವರ ಹೆಂಡತಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ, ವಯಸ್ಸಾಗಿರುವ ತಾಯಿ ವಯಸ್ಸಿಗೆ ಬಂದಿರುವ ಮಗಳು ಹಾಗು ಸಣ್ಣ ವಯಸ್ಸಿನ ಮಗ ಇವರೆಲ್ಲರ ಹಾರೈಕೆ ಇವರ ಮೇಲಿದೆ , ಈ ಎಲ್ಲ ಜವಾಬ್ದಾರಿ ಇವರ ಮೇಲೆ ಇರುವುದರಿಂದ 12 ವರ್ಷದ ಹಿಂದೆ ನಿರ್ಮಿಸಿರುವ ಮನೆಗೆ ಬೇಕಾಗಿರುವ ಯಾವುದೇ ಒಂದು ಮೂಲಭೂತ ಸೌಕರ್ಯ ಇಲ್ಲದೆ ಕುಟುಂಬ ಬಹಳ ನೊಂದಿದೆ.

ಇವರ ಈ ಪರಿಸ್ಥಿತಿಯನ್ನು ನೋಡಿ ನಿತಿನ್ ಶೆಟ್ಟಿ ಕೌಡೂರು ರವರು ಕರಕರಿ ಸಂಸ್ಥೆಗೆ ಮನವಿಯನ್ನು ನೀಡಿರುತ್ತಾರೆ, ಈ ಮನವಿಗೆ ಸ್ಪಂದಿಸಿ ಭರವಸೆಯನ್ನು ನೀಡಿರುತ್ತೇವೆ, ನಮ್ಮ ಕರಕರಿ ಫ್ರೆಂಡ್ಸ್ ತಂಡದವರು ಮನೆಗೆ ಭೇಟಿ ನೀಡಿದಾಗ ನಮಗೆ ನಂಬಲು ಅಸಾಧ್ಯವಾಯಿತು, ದಿನೇಶ್ ಅವರ ಮನೆಯ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ.
ಇಷ್ಟು ವರ್ಷ ಮನೆಗೆ ಕಿಟಕಿ ಬಾಗಿಲು ಇಲ್ಲದೆ ಜೀವನ ಸಾಗಿಸಿದ್ದು ಒಂದು ಪವಾಡವೇ ಸರಿ, ಏನೇ ಆಗಲಿ ದಿನೇಶ್ ಅಣ್ಣ ನಿಮ್ಮ ಜೊತೆ ನಾವಿದ್ದೇವೆ ಎಂದು ಭರವಸೆಯನ್ನು ನೀಡಿ ಬಂದಿರುತ್ತೇವೆ.
ಇಂದು ಈ ಮನೆಯ ಕೆಲಸವನ್ನು ಪ್ರಾರಂಭಿಸಿರುತ್ತೇವೆ ನಿಮ್ಮೆಲ್ಲರ ಸಹಕಾರ ಬಹಳ ಅಮೂಲ್ಯವಾಗಿದ್ದು ಸಹಾಯದ ನಿರೀಕ್ಷೆಯಲ್ಲಿ ನಾವಿದ್ದೇವೆ.
ಈಗ ಈ ಮನೆಗೆ ಅಗತ್ಯ ಬೇಕಾಗಿರುವ ಎರಡು ಬಾಗಿಲು, ಕಿಟಕಿಗಳು, ಗಾರೆ ಕೆಲಸ, ಮತ್ತು ನೆಲಕ್ಕೆ ಕಾವೇ ಹಾಕಿ ಕೊಡಲು ನಮ್ಮ ಸಂಸ್ಥೆ ನಿರ್ಧರಿಸಿರುತ್ತದೆ,ಬೈಲೂರು ಟೈಗರ್ಸ್ ಹುಲಿವೇಷದಿಂದ ಉಳಿದ ಮೊತ್ತ ಮತ್ತು ನಿಮ್ಮೆಲ್ಲರ ಸಹಕಾರ ನಮಗೆ ಬಹಳ ಅಗತ್ಯವಾಗಿದೆ, ದಾನಿಗಳು ಒಂದು ಒಂದು ವಸ್ತುವಿನ ರೂಪದಲ್ಲಿ ನೀಡಿದರೂ ನಮಗೆ ಮನೆಯ ಕೆಲಸ ಮಾಡಲು ಬಹಳ ಅನುಕೂಲವಾಗುತ್ತದೆ.
ನಮ್ಮ ಸಂಸ್ಥೆಯ ಅಕೌಂಟ್ ನಂಬರ್…..
M/S Karkari friends seva balaga Karnataka
Bank name- union bank of india
Branch : KATTINGERI
A/C no – 139122010000511 ( SB)
IFSC CODE: UBIN0913910
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನವೀನ್ ಬೈಲೂರು ವಾಟ್ಸಪ್ ಕರೆ ಮಾತ್ರ +918971247377
ವಿತಿನ್ ಶೆಟ್ಟಿ : 9535253577






















































