
ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪ್ರತಿ ತಾಲೂಕಿನಲ್ಲಿ ಸಮಿತಿಗಳನ್ನು ರಚನೆ ಮಾಡುತ್ತಿದೆ.
ಅದರಂತೆ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಸಾಹಿತಿ ಉಪನ್ಯಾಸಕಿ ಆಗಿರುವ ರಶ್ಮಿತ ಸುರೇಶ್ ಜೋಗಿಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಆಯ್ಕೆಗೆ ದ.ಕ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ವಿಂಧ್ಯಾ ಎಸ್ ,ರೈ ನಿರ್ದೇಶಕ ಚೇತನ್ ಕುಮಾರ್ ಅಮೈ ಹಾಗೂ ಪದಾಧಿಕಾರಿಗಳು ಮತ್ತು ರಾಜ್ಯ ಸಮಿತಿ ಸದಸ್ಯರಾದ ಹೆಚ್ಕೆ ನಯನಾಡು, ಉಮಾ ಸುನಿಲ್ ಹಾಸನ, ಆಶಾ ಅಡೂರು ಉಜಿರೆ, ಸಹಕರಿಸಿದ್ದಾರೆ ಎಂದು ಆಮಂತ್ರಣ ಸಂಸ್ಥೆಯ ವಿಜಯ ಕುಮಾರ್ ಜೈನ್ ತಿಳಿಸಿದ್ದಾರೆ.






















































