26.6 C
Udupi
Tuesday, March 17, 2026
spot_img
spot_img
HomeBlogಎಂ.ಆರ್ .ಪಿ.ಎಲ್ ಅನುದಾನ, ವಿದ್ಯಾಭಾರತಿ ಸಂಯೋಜಿತ ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವದ...

ಎಂ.ಆರ್ .ಪಿ.ಎಲ್ ಅನುದಾನ, ವಿದ್ಯಾಭಾರತಿ ಸಂಯೋಜಿತ ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವದ ನೂತನ ಕಟ್ಟಡಕ್ಕೆ ಶಿಲನ್ಯಾಸ


ವಿದ್ಯಾಭಾರತಿ ಸಂಯೋಜಿತ ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಇದರ ಅಮೃತ ಮಹೋತ್ಸವದ ನೂತನ ಶಾಲಾ ಕಟ್ಟಡಕ್ಕೆ ಎಂ.ಆರ್. ಪಿ .ಎಲ್, ಸಿ.ಎಸ್.ಆರ್ ಅನುದಾನದಿಂದ 42 ಲಕ್ಷ ರೂಪಾಯಿ ಅನುದಾನ ನೀಡಿ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯ್ಯಾರ್ ಇವರು ಶಿಲಾನ್ಯಾಸವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಡಾ.ವೇದಾವತಿ ಆರ್ ಕಲ್ಯಾ , ಹಳೆವಿದ್ಯಾರ್ಥಿ ಶಾಸಕರಾದ ವಿ.ಸುನಿಲ್ ಕುಮಾರ್, ಆಡಳಿತ ಮಂಡಳಿ ಸದಸ್ಯ ಶರತ್ ಕುಮಾರ್ ಕಲ್ಯಾ, ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಉದ್ಯಮಿ ಅರುಣ್ ಪುರಾಣಿಕ್, ಚಂದ್ರಶೇಖರ್ ಹೆಗ್ಡೆ, ಪ್ರಕಾಶ್ ಪುತ್ರನ್, ಪುರಸಭಾ ಸದಸ್ಯೆ ಮೀನಾಕ್ಷಿ ಗಂಗಾಧರ್, ಟ್ರಸ್ಟ್ ನ ಅಧ್ಯಕ್ಷ ಶ್ರೀಧರ್ ಸುವರ್ಣ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಜ್ಞಾನೇಶ್ ಕಾಮತ್, ಕ್ಯಾಪ್ಟನ್ ರಮೇಶ್ ಕಾರ್ಣಿಕ್,ಎರ್ ಮಾರ್ಷಲ್ ಗಿಲ್ಬರ್ಟ್ ಬ್ರಿಗೇಂಜ,ಉದ್ಯಮಿ ಬೋಳ ಗಿರೀಶ್ ಹೆಗ್ಡೆ,ಕಾರ್ಯದರ್ಶಿ ಹರೀಶ್ ಅಂಚನ್,ಸಂತೋಷ್ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಶೆಟ್ಟಿ, ಶಾಲಾ ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿಗಳು, ನಿವೃತ್ತ ಅಧ್ಯಾಪಕರು, ಅಮೃತ ಮಹೋತ್ಸವ ಸಮಿತಿಯ ಸದಸ್ಯರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು.
ಧಾರ್ಮಿಕ ವಿಧಿ ವಿಧಾನಗಳನ್ನು ಅರ್ಚಕರಾದ ಸದಾನಂದ ಶಾಂತಿ ನೆರವೇರಿಸಿದರು.ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ರಾವ್ ಸ್ವಾಗತಿಸಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page