
ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಸಭೆಯು ಇಂದು (28-9-2024) ಶಾಲೆಯ ಸಭಾಂಗಣದಲ್ಲಿ ನೆರವೇರಿತು.
ಪೋಷಕರಾದ ಶ್ರೀಮತಿ ಸುಪ್ರೀಯ ಶೆಟ್ಟಿಯವರು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಅನೇಕ ಸಂಘ ಸಂಸ್ಥೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಸುಪ್ರಿಯಾ ರವರು ಯಕ್ಷಗಾನ, ನಾಟಕ, ನೃತ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಬೈಲೂರು ಶಕ್ತಿ ಕೇಂದ್ರದ ಕ್ರಿಯಾಶೀಲ ಕಾರ್ಯದರ್ಶಿಯಾಗಿರುವ ಇವರು ಬಂಟರ ಸಂಘ ಕಾರ್ಕಳ ಇದರ ಜತೆ ಕಾರ್ಯದರ್ಶಿಯಾಗಿರುತ್ತಾರೆ.






























































































































