ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ರೆಂಜಾಳದ ದೀಕ್ಷಾ

ಅಂತಾರಾಷ್ಟ್ರೀಯ ಮಟ್ಟದ “ಕರಾಟೆ ಚಾಂಪಿಯನ್ಶಿಪ್ -2024”ರಲ್ಲಿ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದ ತೃತೀಯ ಬಿ.ಕಾಂ ವಿದ್ಯಾರ್ಥಿನಿ ರೆಂಜಾಳದ ದೀಕ್ಷಾ,ವಾಸವಿ ಮಹಲ್ ಹುಬ್ಬಳ್ಳಿಯಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಪಂದ್ಯಾಟದ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಈ ಪಂದ್ಯಾಟವು ಅಕ್ಟೋಬರ್ 25 ರಿಂದ 27 ರವರೆಗೆ ನಡೆದಿತ್ತು.
ಇವರು ಸತೀಶ್ ಬೆಳ್ಮಣ್ ಹಾಗೂ ರಂಜಿತ್ ಇವರಿಂದ ಕರಾಟೆ ತರಬೇತಿಯನ್ನು ಪಡೆಯುತ್ತಿರುತ್ತಾರೆ.ದೀಕ್ಷಾ ಇವರು ರೆಂಜಾಳದ ಸುರೇಖಾ – ರವಿ ಪೂಜಾರಿ ದಂಪತಿಗಳ ಪುತ್ರಿ.









