ಕಥೆ (ಭಾಗ- 39)
ಚೇತನ್ ವರ್ಕಾಡಿ

ಸೌಂಧರ್ಯಳ ಮಾತುಗಳನ್ನು ಕೇಳುತ್ತಿದ್ದಂತೆಯೆ ಮಿಥುನ್‌ಗೆ ಆಪ್ತಮಿತ್ರನೆ ಶತ್ರುವಾಗಿ ಗೋಚರಿಸತೊಡಗಿದ.ಎಷ್ಟೋ ವರುಷಗಳ ಸ್ನೇಹದ ಸೇತುವೆ ಮುರಿದಂತಾಯಿತು.ತಾನು ಮದುವೆಯಾಗಬೇಕೆಂದಿದ್ದ ಯುವತಿಯ ಜೊತೆ ಆತನ ಸರಸವೇ!ಇಲ್ಲ ಆಪ್ತಮಿತ್ರನೆಂದು ಅತಿಯಾದ ನಂಬಿಕೆ ಇಟ್ಟ ನನಗೆ ದ್ರೋಹ ಮಾಡಿದವನನ್ನು ಸುಮ್ಮನೆ ಬಿಡಲಾರೆ ಎಂದು ದ್ವೇಷದ ಕಿಚ್ಚು ಹೊರಹಾಕಿದ.ನನಗೂ ಮಧು ಪ್ರೀತಿಸಿ ನಂಬಿಸಿ ದ್ರೋಹ ಮಾಡಿದ ಇದೇ ಗತಿ ನಿಮ್ಮ ಮಂಗಳಳಿಗೂ ಬರಬಾರದೆಂದು ಇಷ್ಟೆಲ್ಲ ವಿವರಿಸಿದೆ ಎಂದು ಹೇಳಿ,ಮುಗ್ದ ಹೆಣ್ಣಿನಂತೆ ತನ್ನ ಕೆಲಸ ಮುಗಿಯಿತೆಂದು ಪೋನ್ ಕಟ್ ಮಾಡಿದಳು.ಸೌಂಧರ್ಯಳ ಮಾತನ್ನೇ ನಿಜವೆಂದು ನಂಬಿದ ಮಿಥುನ್ ಅದರೊಳಗಿನ ಸತ್ಯಕಥೆ ಏನಾಗಿರಬಹುದು ಅನ್ನೋದನ್ನೂ ತಿಳಿಯುವ ಕಾರ್ಯಕ್ಕೆ ಮುಂದಾಗದೆ,ನೇರವಾಗಿ ಮಂಗಳಳ ತಂದೆಗೆ ಪೋನ್ ಮಾಡಿ ಆದಷ್ಟೂ ಬೇಗ ಒಳ್ಳೆ ಮುಹೂರ್ತವಿದ್ದಲ್ಲಿ ಮದುವೆ ಸಿದ್ಧತೆಗಳನ್ನು ನಡೆಸಲು ಮುನ್ಸೂಚನೆ ನೀಡಿದ.
ಇತ್ತ ಏನೂ ತಿಳಿಯದ ಮಧು ಮಂಗಳಳನ್ನು ಮರೆಯಲು ಪ್ರಯತ್ನಿಸುತ್ತಿದ್ದರು ಅವನ ಹೃದಯ ಮರೆಯದಿರು ಗೆಳೆಯ ಅನ್ನುತ್ತಿತ್ತು.
ಮಿಥುನ್ ಹೇಳಿದಂತೆಯೇ ಯಾರಿಗೂ ತಿಳಿಯದಂತೆ ರಾಘವ ಮಗಳ ಮದುವೆಯ ಸಿದ್ಧತೆಯಲ್ಲಿ ತೊಡಗಿದರೆ!ಮಂಗಳಳಿಗೆ ಯಾಕೊ ಹಿಂದೆ ಇದ್ದ ಆ ಖುಷಿ ಸಂಭ್ರಮ ಈವಾಗ ಅವಳಲ್ಲಿ ಕಾಣುತ್ತಿಲ್ಲ.ಮತ್ತೆ ಮತ್ತೆ ತಾನು ಏನನ್ನೋ ಕಳೆದುಬಿಡುತ್ತೇನೊ ಅನ್ನೊ ಆತಂಕ ದಿನದಿಂದ ದಿನಕ್ಕೆ ಆಕೆಯಲ್ಲಿ ಹೆಚ್ಚಾಗತೊಡಗಿತು..ದಿನಗಳು ಕಳೆಯಿತು ಮಿಥುನ್ ಮಧುವಿಗೆ ಕಾಲ್ ಮಾಡೋದು ಇಲ್ಲ ಮಧು ಮಾಡಿದ ಕಾಲ್ ರಿಸೀವ್ ಮಾಡಲು ಹೋಗಲಿಲ್ಲ,ಪ್ರತಿದಿನ ತನ್ನ ಸುಖವನ್ನೇ ಬಯಸುತ್ತಿದ್ದ ಗೆಳೆಯ ಈಗೀಗ ಯಾಕೆ ಈ ರೀತಿಯಾಗಿ ಬಿಟ್ಟ ಎಂದು ಮನದಲ್ಲೇ ಆಲೋಚಿಸಿದರೂ ಉತ್ತರ ಸಿಗದೆ ಆತನ ಕರೆಗಾಗಿಯೇ ಕಾಯುತ್ತಿದ್ದ.ಅಂತು ಇಂತು ಮಂಗಳಳ ಮನೆಯಲ್ಲಿ ಮದುವೆ ಸಡಗರ ಕಾಣುತ್ತಿದ್ದಂತೆಯೆ ಸೌಂಧರ್ಯಳಿಗೆ ಅದೇನೊ ಖುಷಿ, ಆದರೆ ಮದುಮಗಳ ಮುಖದಲ್ಲಿ ಮಾತ್ರ ಆ ಸಂಭ್ರಮವೇ ಕಾಣದಾಯಿತು..
ಇನ್ನೇನು ಮದುವೆಗೆ ಎರಡು ದಿನ ಇರಬೇಕೆಂದರೆ….
(ಮುಂದುವರಿಯುವುದು)






























































































































